Kodagu

ಕಸ್ತೂರಿ ರಂಗನ್ ಹಿಂದೆ ಡೋಂಗಿ ಪರಿಸರವಾದಿಗಳ ಕೈವಾಡ

admincoorgdaily

ಕಸ್ತೂರಿ ರಂಗನ್ ಹಿಂದೆ ಡೋಂಗಿ ಪರಿಸರವಾದಿಗಳ ಕೈವಾಡ
ಮಡಿಕೇರಿ: ಕಸ್ತೂರಿ ರಂಗನ್ ವರದಿ ಡೋಂಗಿ ಪರಿಸರವಾದಿಗಳ ಷಡ್ಯಂತ್ರ ಎಂದು ಸೇವ್ ಕೊಡಗು ವೇದಿಕೆಯ ಮಧು ಬೋಪಣ್ಣ ಆರೋಪಿಸಿದರು.

80-90ರ ದಶಕದಿಂದಲೇ ಕೆಲವರು ವಿದೇಶಿ ದೇಣಿಗೆಗಾಗಿ ಕೊಡಗನ್ನು ಅರಣ್ಯ ಮಾಡಲು ಹೊರಟಿದ್ದಾರೆ. ಜಮ್ಮಾ ಜಮೀನು ಅರಣ್ಯೀಕರಣ, ಗ್ರೇಟರ್ ತಲಕಾವೇರಿ ಯೋಜನೆ ಒತ್ತಾಯ, 2012ರ ಜಮ್ಮಾಬಾಣೆ ವಿಧೇಯಕ ತಡೆ ಹಿಂದೆ ಇದೇ ತಂಡವಿದೆ ಎಂದರು.

ವರದಿಯಿಂದ ತೊಂದರೆ ಇಲ್ಲ ಎನ್ನುವವರು ಮೊದಲು ತಮ್ಮ ತೋಟವನ್ನು ಸೂಕ್ಷ್ಮ ವಲಯಕ್ಕೆ ಸೇರಿಸಲಿ ಎಂದು ಸವಾಲು ಹಾಕಿದರು. ಕರ್ನಾಟಕ ಕೇರಳ ಮಾದರಿ ಅನುಸರಿಸಬೇಕು. ಕೇರಳ ಸರ್ವೇ ಮಾಡಿ ವ್ಯಾಪ್ತಿಯನ್ನು 9993ರಿಂದ 8590 ಚ.ಕಿ.ಮೀ.ಗೆ ಇಳಿಸಿದೆ. ಇಲ್ಲದಿದ್ದರೆ ಸಿ & ಡಿ ಜಮೀನು ಸೇರಿದರೆ 15 ಸಾವಿರ ಕುಟುಂಬ ಬೀದಿಪಾಲಾಗಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಮುಖಂಡರಾದ  ಉದಯ್ ಶಂಕರ್ , ಜಿನ್ನು ನಾಣಯ್ಯ, ದಿನೇಶ್ ಉಪಸ್ಥಿತರಿದ್ದರು.