ಡಾ. ಅಯ್ಯಮಂಡ ಮುತ್ತಮ್ಮ ಎ.ಆರ್. ಅವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ
admincoorgdaily

ವಿರಾಜಪೇಟೆ:ವಿರಾಜಪೇಟೆಯ ಕಾವೇರಿ ಕಾಲೇಜಿನ ಗ್ರಂಥಪಾಲಕಿ ಡಾ. ಅಯ್ಯಮಂಡ ಮುತ್ತಮ್ಮ ಎ.ಆರ್. ಅವರಿಗೆ ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕರ ಸಂಘ (ರಿ) ಮಂಗಳೂರು ವಿಭಾಗದ ವತಿಯಿಂದ 2026ನೇ ಸಾಲಿನ ಅತ್ಯುತ್ತಮ ಗ್ರಂಥಪಾಲಕಿ ಎಂಬ ನೆಲೆಯಲ್ಲಿ ಅಧ್ಯಾಪಕ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಉಡುಪಿ ಜಿಲ್ಲೆಯ ಕಿದಿಯೂರಿನ ಮಾಧವ ಕೃಷ್ಣ ಸಭಾ ಭವನದಲ್ಲಿ ಇತ್ತೀಚಿಗೆ ಜರುಗಿದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರ ಕಲಿಕೆಯ ಹಾಗೂ ಸಂಶೋಧನಾ ಮನೋಭಾವವನ್ನು ಬೆಳೆಸುವಲ್ಲಿ ಹಾಗೂ ಇ- ಸಂಪನ್ಮೂಲ, ಡಿಜಿಟಲ್ ಸಂಪನ್ಮೂಲ ನಿರ್ವಹಣೆ, ಗ್ರಂಥಾಲಯ ಆಡಳಿತ, ಐಸಿಟಿ-ಆಧಾರಿತ ಗ್ರಂಥಾಲಯ ಸೇವೆಗಳು, ಬಳಕೆದಾರರ ಸಾಕ್ಷರತಾ ಉಪಕ್ರಮಗಳು ಸೇರಿದಂತೆ ಪುಸ್ತಕ ಪ್ರಪಂಚಕ್ಕೆ ಸಂಬಂಧಿಸಿದ ನವೀನ ವಿಚಾರಗಳಲ್ಲಿ ಹಲವು ಸಂಶೋಧನಾತ್ಮಕ ಲೇಖನಗಳನ್ನು ನಿಯತಕಾಲಿಕೆಗಳಲ್ಲಿ ಪ್ರಕಟಿಸಿರುವುದರೊಂದಿಗೆ ,
ಗ್ರಂಥಾಲಯ ಸಿಬ್ಬಂದಿಗಳಲ್ಲಿ ವೃತ್ತಿಪರತೆ ಮತ್ತು ವೃತ್ತಿಪರ ಮನೋಭಾವ ಎಂಬ ಪುಸ್ತಕವನ್ನು ಬರೆಯೂದರೊಂದಿಗೆ ಹಲವು ಶೈಕ್ಷಣಿಕ ಕಾರ್ಯಾಗಾರ, ವಿಚಾರ ಸಂಕಿರಣ, ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುದನ್ನು ಪರಿಗಣಿಸಿ ಅಧ್ಯಾಪಕ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಡಾ. ಎ.ಆರ್ .ಮುತ್ತಮ್ಮ ರವರು ಮೈತಾಡಿ ಗ್ರಾಮದ ಅಯ್ಯಮಂಡ ಅಯ್ಯಪ್ಪರವರ ಪತ್ನಿಯಾಗಿದ್ದು 2009 ರಿಂದ ನಿರಂತರವಾಗಿ 18 ವರ್ಷಗಳಿಂದ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸುತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ಯವರು ಮುತ್ತಮ್ಮ ರವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.