Kodagu

ಡಾ.ಮಂತರ್ ಗೌಡ ರವರಿಂದ ನೂತನ ಕಾಂಕ್ರೀಟ್ ರಸ್ತೆ ವೀಕ್ಷಣೆ

admincoorgdaily

ಡಾ.ಮಂತರ್ ಗೌಡ ರವರಿಂದ ನೂತನ ಕಾಂಕ್ರೀಟ್  ರಸ್ತೆ ವೀಕ್ಷಣೆ
ಮಡಿಕೇರಿ: ನಗರದಲ್ಲಿರುವ ಕೊಡವ ಸಮಾಜ ರುದ್ರಭೂಮಿ
( ಕೊಡವ ಕ್ಯಾಕೊಳ) ಗೆ ನಿರ್ಮಾಣ ಮಾಡಿರುವ ನೂತನ ಕಾಂಕ್ರೀಟ್ ರಸ್ತೆಯನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ವೀಕ್ಷಣೆ ಮಾಡಿದರು.

ಮಡಿಕೇರಿ  ಕೊಡವ ಸಮಾಜದ ಸದಸ್ಯರೊಬ್ಬರ ಅಂತ್ಯಕ್ರಿಯೆ ಸಂಧರ್ಭದಲ್ಲಿ ಪಾಲ್ಗೊಂಡ ಸಂಧರ್ಭದಲ್ಲಿ ಕಲ್ಲು ಕಿತ್ತು ಬಂದಿರುವ ರಸ್ತೆಯನ್ನು ಗಮನಿಸಿ ತಮ್ಮ ಶಾಸಕರ ಕ್ಷೇತ್ರಾಭಿವೃದ್ದಿ ಅನುದಾನದಿಂದ 
5 ಲಕ್ಷ ರೂಗಳ ಅನುದಾನವನ್ನು ಡಾ ಮಂತರ್ ಗೌಡ ಒದಗಿಸಿದ್ದರು.
ಶಾಸಕರು ರಸ್ತೆ ವೀಕ್ಷಣೆ ಮಾಡಿದಾಗ ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ ನಗರ ಸಭಾ ಸದಸ್ಯ ಮುದ್ದುರಾಜ್ ಶಾಸಕರೊಂದಿಗೆ ಉಪಸ್ಥಿತರಿದ್ದರು.