ಮುತ್ತಾರ್ಮುಡಿಯಲ್ಲಿ ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಗೆ ಡಾ ಮಂತರ್ ಗೌಡ ರವರಿಂದ ಚಾಲನೆ
admincoorgdaily

ಮಡಿಕೇರಿ;ಮಡಿಕೇರಿ ಮೂರ್ನಾಡು ರಸ್ತೆಯ ಮುತ್ತಾರ್ಮುಡಿ ಯಿಂದ ಬಿಳಿಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಒಂದು ಕೋಟಿ ಮೂವತ್ತು ಲಕ್ಷ ರೂ ವೆಚ್ಚದ ಕಾಂಕ್ರೀಟ್ ಕಾಮಗಾರಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಗ್ರಾಮೀಣ ರಸ್ತೆಗಳನ್ನು ಸುಸಜ್ಜಿತ
ಸರ್ವ ಋತು ಹಾಗೂ
ಶಾಶ್ವತ ಬಾಳಿಕೆ ಬರುವ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಸದರಿ ರಸ್ತೆಗೆ ಮುಖ್ಯಮಂತ್ರಿಗಳು ನೀಡಿದ 50 ಕೋಟಿ ರೂಗಳ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು ಗ್ರಾಮಸ್ಥರು ರಸ್ತೆ ಅಗಲೀಕರಣಕ್ಕೆ ಸ್ವಲ್ಪ ಜಾಗವನ್ನು ಬಿಟ್ಟುಕೊಡುವ ಕೆಲಸ ಮಾಡಬೇಕು ಎಂದು ವಿನಂತಿ ಮಾಡಿದ ಡಾ ಮಂತರ್ ಗೌಡ ರವರು ಕಾಮಗಾರಿ ಗುಣಮಟ್ಟದ ಬಗ್ಗೆ ಸಾರ್ವಜನಿಕರು ನಿಗಾ ವಹಿಸಬೇಕು,
ತೃಪ್ತಿಕರವಾಗಿಲ್ಲ ಎಂದು ಕಂಡು ಬಂದರೆ ತಕ್ಷಣವೇ ಮಾಹಿತಿ ನೀಡಿ ಎಂದು ಹೇಳಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರು ಮಾತನಾಡಿ ಹಿಂದೆ ಗ್ರಾಮೀಣ ರಸ್ತೆಗಳು ಐದು,ಹತ್ತು ಲಕ್ಷ ರೂಗಳ ವೆಚ್ಚದಲ್ಲಿ ಐವತ್ತು ಅಥವಾ ನೂರು ಮೀಟರ್ ಕಾಂಕ್ರೀಟ್ ರಸ್ತೆ ನಡೆಯುತ್ತಿತ್ತು.
ಈಗ ಕ್ಷೇತ್ರದ ಶಾಸಕರ ಶಾಸಕರಾದ ಡಾ ಮಂತರ್ ಗೌಡ ರವರ ಪರಿಶ್ರಮದಿಂದ ಕೋಟಿ ರೂ ವೆಚ್ಚದಲ್ಲಿ ಕಿ.ಮೀ. ಗಟ್ಟಲೆ ಕಾಂಕ್ರೀಟ್ ರಸ್ತೆ ಎಲ್ಲಾ ಕಡೆ ನಿರ್ಮಾಣವಾಗುತ್ತಿದ್ದು ಇದೊಂದು ಆಶಾದಾಯಕ ಬೆಳವಣಿಗೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ,ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕೇಶವ,ಬೂತ್ ಅಧ್ಯಕ್ಷರಾದ ಪಾರೆಮಜಲು ರಾಜೇಶ್,ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಯಶ್ ದೊಲ್ಪಾಡಿ,ಪ್ರಧಾನ ಕಾರ್ಯದರ್ಶಿ ರವೂಫ್ ಶೇಖ್, ಪ್ರಮುಖರಾದ ಮಟ್ಟದ ಧನಂಜಯ,ಶಿವ ಕುಮಾರ್, ದೇರಜೆ ಕಿರಣ್, ಜಲೀಲ್ ಮೂರ್ನಾಡ್ ,ತೆಕ್ಕಡ ರಮೇಶ್, ಪಾರೆಮಜಲು ಸುಬ್ಬಯ್ಯ,ಕೇಕಡ ರಮೇಶ್,
ಪಾರೆಮಜಲು ಅನಿತಾ, ವಿ.ಜಿ.ಮೋಹನ್,
ತೆಕ್ಕಡೆ ಪ್ರಸನ್ನ,ಕುಮಾರ,
ಅರಮನೆ ಪಿ ವಸಂತ,ಬಿಳಿಯಾರ ವಿನೋದ್ ಕುಮಾರ್,
ಪಾರೆ ಮಜಲು ನಂದಕುಮಾರ್ ಸೇರಿದಂತೆ ಸ್ಥಳೀಯ ನಿವಾಸಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.