Kodagu

ಕುಂಬಳದಾಳು -ಮೇಕೇರಿ ರಸ್ತೆ ಅಭಿವೃದ್ದಿಗೆ ಡಾ ಮಂತರ್ ಗೌಡ ರವರಿಂದ ಮೂರು ಕೋಟಿ ರೂಗಳ ಅನುದಾನ

admincoorgdaily

ಕುಂಬಳದಾಳು -ಮೇಕೇರಿ ರಸ್ತೆ ಅಭಿವೃದ್ದಿಗೆ ಡಾ ಮಂತರ್ ಗೌಡ ರವರಿಂದ ಮೂರು ಕೋಟಿ ರೂಗಳ ಅನುದಾನ
ಮಡಿಕೇರಿ; ಹೊದ್ದೂರು ಪಂಚಾಯತ್ ವ್ಯಾಪ್ತಿಯ ಕುಂಬಳದಾಳು,
ಬಿಳಗೇರಿ ಗ್ರಾಮದ ಮೂಲಕ ವಿರಾಜಪೇಟೆ ಮುಖ್ಯರಸ್ತೆಯನ್ನು ಮೇಕೇರಿ  ಭಾಗದಲ್ಲಿ ಸಂಪರ್ಕಿಸುವ ಪಿ.ಡಬ್ಲ್ಯು. ಡಿ ರಸ್ತೆಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಮೂರು ಕೋಟಿ ರೂಗಳ ಅನುದಾನ ಒದಗಿಸಿದ್ದಾರೆ.

ಇಂದು ಶಾಸಕರ ಮಡಿಕೇರಿ ಕಛೇರಿಯಲ್ಲಿ ಕುಂಬಳದಾಳು ಗ್ರಾಮದ ಪ್ರಮುಖರ ನಿಯೋಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ ,
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಹಾಗೂ ಮುಖಂಡರಾದ ಬಾಳಾಡಿ ಪ್ರತಾಪ್ ಕುಮಾರ್ ರವರೊಂದಿಗೆ ಡಾ ಮಂತರ್ ಗೌಡ ರವರನ್ನು ಭೇಟಿಯಾಗಿ ಕುಂಬಳದಾಳು ಬಿಳಿಗೇರಿ,
ಹೊದವಾಡ ಗ್ರಾಮದ ಜನರಿಗೆ ಮೂರ್ನಾಡು ಮತ್ತು ಮಡಿಕೇರಿ ರಸ್ತೆಯನ್ನು ತಲುಪಲು ಅತ್ಯಂತ ಸಮೀಪದ ರಸ್ಯೆಯಾಗಿದೆ ಎಂದು ವಿವರಿಸಿದರು.

ಡಾ ಮಂತರ್ ಗೌಡ ರವರು ತಾವು ಹಿಂದೆ ಈ ದಾರಿಯನ್ನು ವೀಕ್ಷಣೆ ಮಾಡಿದ್ದು ಸದರಿ ರಸ್ತೆ ಅಭಿವೃದ್ದಿಯಿಂದ ಅನೇಕ ಗ್ರಾಮದ ಜನರಿಗೆ ಅನುಕೂಲ ಆಗಲಿದೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.ನಂತರ ಲೋಕೋಪಯೋಗಿ  ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಗಿರೀಶ್ ರವರನ್ನು ಕರೆಸಿ  ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಅನುದಾನದಿಂದ ಮೂರು ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.ಶಾಸಕರ ಸೂಕ್ತ ಸ್ಪಂದನೆಗೆ ಗ್ರಾಮದ ಪ್ರಮುಖರು ಹರ್ಷ ವ್ಯಕ್ತಪಡಿಸಿ ಧನ್ಯವಾದ ಅರ್ಪಿಸಿದರು.

ಶಾಸಕರನ್ನು ಭೇಟಿಯಾದ ನಿಯೋಗದಲ್ಲಿ 
ಕುಲ್ಲಚನ ದಿನೇಶ್,ಬಬ್ಬಿರ ಗಿರೀಶ್,ಬಬ್ಬಿರ ಮನು,ಬಾಳಾಡಿ ಪ್ರವೀಣ್,ದೇವಜನ ವಿಖ್ಯಾತ್,
ಪಾರೆಮಜಲು
ಹರೀಶ್,ಚೆರಿಯಮನೆ ಸೂರಿ ಉಪಸ್ಥಿತರಿದ್ದರು.