Kodagu

ಕುಡಿದು ಬೈಕ್ ಚಾಲನೆ - ಸೋಶಿಯಲ್ ಮೀಡಿಯಾ ದೂರಿನ ಮೇರೆಗೆ ಪೊಲೀಸರ ಕಾರ್ಯಾಚರಣೆ; ಆರೋಪಿಗೆ ಕೋರ್ಟ್‌ನಿಂದ ರೂ. 10,000/- ದಂಡ!

admincoorgdaily

ಕುಡಿದು ಬೈಕ್ ಚಾಲನೆ - ಸೋಶಿಯಲ್ ಮೀಡಿಯಾ ದೂರಿನ ಮೇರೆಗೆ ಪೊಲೀಸರ ಕಾರ್ಯಾಚರಣೆ;  ಆರೋಪಿಗೆ ಕೋರ್ಟ್‌ನಿಂದ ರೂ. 10,000/- ದಂಡ!
ಮಡಿಕೇರಿ: ವ್ಯಕ್ತಿಯೊಬ್ಬರು ಮದ್ಯಪಾನ ಮಾಡಿ ಬೈಕ್ ಚಾಲನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣದ ಮೂಲಕ ನೀಡಿದ ದೂರಿನ ಮೇರೆಗೆ, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಂಬಂಧಪಟ್ಟ ವ್ಯಕ್ತಿ ಹಾಗೂ ಬೈಕ್ ಅನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಂಡಿರುತ್ತಾರೆ.

ಪ್ರಕರಣದ ವಿಚಾರಣೆ ನಡೆಸಿದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಕುಶಾಲನಗರ ರವರು ಆರೋಪಿತನಿಗೆ 
ರೂ. 10,000/- ದಂಡ ವಿಧಿಸಿರುತ್ತಾರೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಅಪಾಯಕಾರಿ ಮಾತ್ರವಲ್ಲ ಕಾನೂನುಬಾಹಿರವೂ ಹೌದು. ನಿಮ್ಮ ಸುರಕ್ಷತೆ ಹಾಗೂ ಇತರರ ಜೀವದ ರಕ್ಷಣೆಗೆ ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಕೊಡಗು ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.