ದಸರಾ ಆಚರಣೆ; ಕುಶಾಲನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಹಿಂಪಡೆದು ಜಿಲ್ಲಾಧಿಕಾರಿ ಆದೇಶ
admincoorgdaily

ಮಡಿಕೇರಿ, ಅ. 21: ಕೊಡಗು ಜಿಲ್ಲೆಯಲ್ಲಿ ದಸರಾ ಹಬ್ಬದ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿಧಿಸಲಾಗಿದ್ದ ಮದ್ಯ ಮಾರಾಟ ನಿಷೇಧ ಆದೇಶವನ್ನು ಜಿಲ್ಲಾಧಿಕಾರಿ ಭಾಗಶಃ ಮಾರ್ಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ ಮನವಿ ಮೇರೆಗೆ (ಪತ್ರ ಸಂಖ್ಯೆ: ಎಸ್ಬಿ/ಕೊಡಗು/ದಸರಾ/ಬಿಬಿ/36/2026, ದಿ: 08/10/2026) ಜಿಲ್ಲಾಡಳಿತವು ಅ.12 ರಂದು ಹೊರಡಿಸಿದ್ದ ಆದೇಶದಂತೆ ಅಕ್ಟೋಬರ್ 21 ರ ಬೆಳಿಗ್ಗೆ 6 ಗಂಟೆಯಿಂದ ಅಕ್ಟೋಬರ್ 22 ರ ಸಂಜೆ 6 ಗಂಟೆಯವರೆಗೆ ಜಿಲ್ಲೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧಿಸಲಾಗಿತ್ತು.
ಆದರೆ ಇದೀಗ ಪರಿಷ್ಕೃತ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಹಿಂದಿನ ಆದೇಶದ ಕ್ರಮ ಸಂಖ್ಯೆ 2 ರಲ್ಲಿ ತಿಳಿಸಿದ್ದ ಕುಶಾಲನಗರ ವ್ಯಾಪ್ತಿಯ ಮದ್ಯ ಮಾರಾಟ ನಿಷೇಧವನ್ನು ಹಿಂಪಡೆದಿದ್ದಾರೆ.
ಉಳಿದಂತೆ ಹಿಂದಿನ ಆದೇಶದಲ್ಲಿ ಯಾವುದೇ ಮಾರ್ಪಾಡು ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.