ಮಡಿಕೇರಿಯಲ್ಲಿ ದಸರಾ ಜಿಲ್ಲಾ ಮಟ್ಟದ ಕ್ರೀಡಾಕೂಟ: ಅ.11 ರಿಂದ 19ರವರೆಗೆ ಆಯೋಜನೆ
admincoorgdaily

ಮಡಿಕೇರಿ: ದಸರಾ ಹಿನ್ನೆಲೆಯಲ್ಲಿ ಅ.11 ರಿಂದ 19ರವರೆಗೆ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ತಿಳಿಸಿದರು.
ಅ.13ರಂದು ಬೆಳಿಗ್ಗೆ 7.30ಕ್ಕೆ ಬನ್ನಿಮಂಟಪದಿಂದ ಕ್ರೀಡಾ ಜ್ಯೋತಿ ಮೆರವಣಿಗೆ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುವುದು.
ಅ.11ರಂದು ಬೆಳಿಗ್ಗೆ 6 ಗಂಟೆಗೆ ಜನರಲ್ ತಿಮ್ಮಯ್ಯ ವೃತ್ತದಿಂದ ಮ್ಯಾರಥಾನ್ ಮತ್ತು ರಸ್ತೆ ಓಟ ನಡೆಯಲಿದೆ. ಅದೇ ದಿನ ಫುಟ್ಬಾಲ್, ಚೆಸ್, ಸ್ನೂಕರ್, ರಿಂಕ್ ಹಾಕಿ ಪಂದ್ಯಾಟಗಳು ನಡೆಯಲಿವೆ. ಅ.13ರಂದು ಓಟ, ಗುಂಡು ಎಸೆತ, ವಾಲಿಬಾಲ್, ಹಗ್ಗಜಗ್ಗಾಟ, ಥ್ರೋಬಾಲ್, ಅ.14-15ರಂದು ಕೇರಂ, ಟಿಟಿ, ಸಾಮೂಹಿಕ ನೃತ್ಯ, ಅ.16ರಂದು ಚಿತ್ರಕಲಾ, ಅ.17ರಂದು ಕಬಡ್ಡಿ, ಅ.18ರಂದು ರಾಜ್ಯಮಟ್ಟದ ಹೋರಿ ಪ್ರದರ್ಶನ, ಅ.19ರಂದು ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರದಾನ ಕಾರ್ಯದರ್ಶಿ ವಾಗೀಶ್, ಯೇಣುಕುಮಾರ್, ಸಮಿತಿ ಪ್ರಮುಖರಾದ ಚರಣ್ ಕುಮಾರ್, ಭರತ್ ಇದ್ದರು.