Kodagu

ಚುನಾವಣಾ ಆಯೋಗ ಬಿಜೆಪಿ ಅಸ್ತ್ರವಾಗಿದೆ: ಜ್ಞಾನೇಶ್ ಕುಮಾರ್ ವಿರುದ್ಧ ಧರ್ಮಜ ಉತ್ತಪ್ಪ ವಾಗ್ದಾಳಿ

admincoorgdaily

ಚುನಾವಣಾ ಆಯೋಗ ಬಿಜೆಪಿ ಅಸ್ತ್ರವಾಗಿದೆ: ಜ್ಞಾನೇಶ್ ಕುಮಾರ್ ವಿರುದ್ಧ ಧರ್ಮಜ ಉತ್ತಪ್ಪ ವಾಗ್ದಾಳಿ
ಮಡಿಕೇರಿ: ಎಸ್‌ಐಆರ್ ಹೆಸರಲ್ಲಿ ಮತದಾರರ ಹಕ್ಕು ಕಸಿಯುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಿ ಬಂಧಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಆಗ್ರಹಿಸಿದರು.

ಎಸ್.ಐ.ಆರ್ ಹೆಸರಿನಲ್ಲಿ ಬಿ.ಜೆ.ಪಿ.ಯ ಹಸ್ತಕ್ಷೇಪದಿಂದ ನೈಜ ಮತದಾರರನ್ನು ಪಟ್ಟಿಯಿಂದ ತೆಗೆಯಲಾಗುತ್ತಿದೆ. ಆದಿವಾಸಿ, ದಲಿತ, ಅಲ್ಪಸಂಖ್ಯಾತರ ಹಕ್ಕು ಕಸಿಯುವ ಷಡ್ಯಂತ್ರ ನಡೆಯುತ್ತಿದೆ. ಆಯೋಗ ಬಿಜೆಪಿಯ ಅಸ್ತ್ರವಾಗಿದೆ ಎಂದು ದೂರಿದರು
ಮಾಜಿ ಸಚಿವ ಎಂ.ಸಿ.ನಾಣಯ್ಯ ಮಾತನಾಡಿ, ಜ್ಞಾನೇಶ್ ಕುಮಾರ್ ಪ್ರಧಾನಿ ಮೋದಿ, ಅಮಿತ್ ಶಾ ನಿರ್ದೇಶನದಂತೆ ಸರ್ವಾಧಿಕಾರಿಯಾಗಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಆದಷ್ಟು ಶೀಘ್ರವಾಗಿ ಅವರನ್ನು ವಜಾಗೊಳಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಸಿಪಿಐ ಮುಖಂಡರಾದ ರಮೇಶ್ ಉಪಸ್ಥಿತರಿದ್ದರು.