ನಿಗಮ ಮಂಡಳಿಗಳಿಗೆ ನಿರ್ದೇಶಕರ ಆಯ್ಕೆ; ಕೊಡಗಿನಿಂದ ಐವರಿಗೆ ಸ್ಥಾನ!
admincoorgdaily

ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರ ವಿವಿಧ ನಿಗಮ ಮಂಡಳಿಗಳಿಗೆ ಹಾಗೂ ಪ್ರಾಧಿಕಾರಗಳಿಗೆ ನಿರ್ದೇಶಕರುಗಳನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆಗೊಳಿಸಿದೆ.
ಕೊಡಗಿನಿಂದ 5 ನಿರ್ದೇಶಕರು ನಿಗಮಗಳಿಗೆ ಆಯ್ಕೆಯಾಗಿದ್ದಾರೆ.
ಕಾವೇರಿ ಜಲಾನಯನ ಪ್ರದೇಶ ಅಭಿವೃದ್ಧಿ ಮಂಡಳಿ ನಿರ್ದೇಶಕರಾಗಿ ಸಂಪಾಜೆಯ ಹೆಚ್.ಟಿ. ಶಿವಪ್ರಸಾದ್ (ಸೂರಜ್ ಹೊಸೂರು) ನೇಮಕ ಆಗಿದ್ದಾರೆ. ಗೋಣಿಕೊಪ್ಪಲಿನ ಅರ್ವತೋಕ್ಲು ಗ್ರಾಮದ ನಿವಾಸಿ ಎ.ಜೆ. ಬಾಬು ರವರು ಚೆಸ್ಕಾಂ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕರಾಗಿ ನಾಪೋಕ್ಲುವಿನ ಕೆ.ಎ. ಇಸ್ಮಾಯಿಲ್ ನೇಮಕಗೊಂಡಿದ್ದಾರೆ.
ಮಲೆನಾಡು ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿಯ ನಿವಾಸಿ ಕೆ.ಎಂ. ಲೋಕೇಶ್ ಅವರು ಆಯ್ಕೆಗೊಂಡಿದ್ದಾರೆ.
ಶ್ರೀ ಕಂಠೀರವ ಸ್ಟುಡಿಯೋಸ್ ನಿರ್ದೇಶಕರಾಗಿ ಕಿಗ್ಗಾಲು ಗ್ರಾಮದ ಐ.ಎಲ್. ಚಿಣ್ಣಪ್ಪ ನೇಮಕ ಆಗಿದ್ದಾರೆ.