ಮಡಿಕೇರಿಯಲ್ಲಿ ಕೆಎಸ್ಆರ್ಟಿಸಿ ಎಸ್ಸಿ/ಎಸ್ಟಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
admincoorgdaily

ಮಡಿಕೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದ ಮಡಿಕೇರಿ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಮಡಿಕೇರಿ ಘಟಕದ ಅಧ್ಯಕ್ಷರಾಗಿ ನಾಗರಾಜು ಕೊಣನೂರು, ಮಹಿಳಾ ಅಧ್ಯಕ್ಷರಾಗಿ ಶ್ರೀಮತಿ ಪುಷ್ಪ, ಕಾರ್ಯದರ್ಶಿಯಾಗಿ ಶ್ರೀಮತಿ ಚಿತ್ರ ಅವರು ಆಯ್ಕೆಯಾಗಿದ್ದಾರೆ. ಜೊತೆಗೆ ಮಹೇಶ್, ಪಿ.ಜಿ.ರಘು, ಜವರಾಯಿ, ಸೋಮಶೇಖರ್, ಪ್ರಸನ್ನ ಕುಮಾರ್, ಪ್ರಭುಕುಮಾರ್, ಶಶಿಕುಮಾರ್, ಮಂಜುನಾಥ್ ಹೆಚ್.ಎಂ., ಪುರುಷೋತ್ತಮ್, ನಾರಾಯಣಮೂರ್ತಿ, ಚಂದ್ರ ಬಿ.ಪಿ., ನಾಗರಾಜು ಬಿ. ಅವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ರಾಮಚಂದ್ರ ಎಂ.ಸಿ., ಪುತ್ತೂರು ವಿಭಾಗದ ಅಧ್ಯಕ್ಷ ಕುಮಾರಸ್ವಾಮಿ ಸಿ.ಎಸ್., ಮಡಿಕೇರಿ ಘಟಕದ ಗೌರವ ಅಧ್ಯಕ್ಷ ವಿನಯ್ ಸಿಪಿಟಿ ಹಾಗೂ ಸಹಕಾರ ಸಂಘದ ನಿರ್ದೇಶಕ ಶ್ರೀನಿವಾಸ್ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು.