ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಬೆಡೆಡ್ ಸಿಸ್ಟಮ್ಸ್ ಮತ್ತು FPGA ಅಧಾರಿತ ಸಿಸ್ಕಮ್ ಡಿಸೈನ್ ಕಾರ್ಯಾಗಾರ
admincoorgdaily

ಗೋಣಿಕೊಪ್ಪ: ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಪೊನ್ನಂಪೇಟೆಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 2026 ರ ಸೆಪ್ಟೆಂಬರ್ 22 ರಿಂದ 26 ರವರೆಗೆ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಎಂಬೆಡೆಡ್ ಸಿಸ್ಟಮ್ಸ್ ಹಾಗೂ 7ನೇ ಸಮಿಸ್ಟರ್ ವಿದ್ಯಾರ್ಥಿಗಳಿಗೆ ಎಫ್.ಪಿ.ಜಿ.ಎ. ಆಧಾರಿತ ಸಿಸ್ಟಮ್ ವಿನ್ಯಾಸ ಕುರಿತು ತರಬೇತಿ ನೀಡಲಾಗುತ್ತಿದೆ.
2025-26ನೇ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಆಧಾರಿತ ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಣೆಗೊಂಡ ಪೇಪರ್‌ಗಳ ಸಂಗ್ರಹವಾದ 'ಎಲೈಟ್ ಪ್ರಭಿಜ್ಞಾನ-5' ತಾಂತ್ರಿಕ ಜರ್ನಲ್ ಅನ್ನು ಬಿಡುಗಡೆ ಮಾಡಲಾಯಿತು.
ಬೆಂಗಳೂರಿನ ಕ್ರೇನ್ಸ್ ವರ್ಸಿಟಿ ಪ್ರೈ.ಲಿ..ನ ತರಬೇತಿ ವ್ಯವಸ್ಥಾಪಕರು ಶ್ರೀ ಅಂಡ್ರ ಫರ್ನಾಂಡಿಸ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ವಿವಿಧ ತಾಂತ್ರಿಕ ಅಂಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮಕ್ಕೆ ಕೆ.ಇ.ಎಸ್.ನ ಗೌರವಾನ್ವಿತ ಅಧ್ಯಕ್ಷರಾದ ಡಾ. ಎಂ.ಸಿ. ಕಾರ್ಯಪ್ಪ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಮುಂದೆ ಇಂತಹ ಕಾರ್ಯಕ್ರಮಗಳಿಗೆ ಅಡಳಿತ ಮಂಡಳಿಯು ಸದಾಕಾಲ ಬೆನ್ನಲುಬಾಗಿ ನಿಂತಿರುತ್ತದೆ ಎಂದು ಭರವಸೆ ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಎಂ. ಬಸವರಾಜ್ ಅವರು ಈ ಮೇಲ್ಕಂಡ ವಿಷಯದಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ಮುಂದ ದೇಶದಲ್ಲಿ ಹೇರಳವಾದ ಉದ್ಯೋಗಾವಕಾಶವು ದೊರೆಯುತ್ತದೆ ಎಂದು ತಿಳಿಸಿದರು.
ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಅಗತ್ಯವಿರುವ ಆಧುನಿಕ ತಂತ್ರಜ್ಞಾನಗಳ ಪರಿಚಯ, ಪ್ರಾಯೋಗಿಕ ಅನುಭವ ಹಾಗೂ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ವಿಭಾಗದ ಮುಖ್ಯಸ್ಥರಾದ ಡಾ. ದಿವಾಕರ ಎಸ್.ಎಸ್. ಅವರು ತಿಳಿಸಿದರು. ಕಾರ್ಯಕ್ರಮದ ಸಂಯೋಜಕರಾದ ಪ್ರೊ. ರಮ್ಯಾ ಸಿ. ಮತ್ತು ಪ್ರೊ. ಶ್ರುತಿ ಕೆ.ಎನ್. ಮತ್ತು ಬೋಧಕ ಸಿಬ್ಬಂದಿ ಪ್ರೊ. ಸುಷ್ಮಾ ಕೆ.ಆರ್., ಪ್ರೊ. ಮಹೇಂದ್ರ ಎಸ್.ಎಂ., ಪ್ರೊ. ದೇಚಕ್ಕ ಎಂ.ಪಿ., ಪ್ರೊ. ಸುಮನ ಎಚ್.ಎಂ. ಹಾಗೂ ಪ್ರೊ. ತಾರುಣ್ಯ ಸಿ.ಎ. ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.