Kodagu

ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಇ.ಒ.ಚಾಲನೆ

admincoorgdaily

ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಇ.ಒ.ಚಾಲನೆ
ಮಡಿಕೇರಿ:-ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ಸ್ವಚ್ಛತಾ ಹೀ ಸೇವಾ-2026  ಪಾಕ್ಷಿಕ ಕಾರ್ಯಕ್ರಮಕ್ಕೆ ವಿರಾಜಪೇಟೆ ತಾ.ಪಂ.ಇ.ಒ.ರಾಜೇಶ ಅವರು ಚಾಲನೆ ನೀಡಿದರು.
ಒಂದು ದಿನ ಒಂದು ಗಂಟೆ ಎಲ್ಲರೂ ಒಟ್ಟಿಗೆ ಶ್ರಮದಾನ "(ಏಕ್ ದೀನ್ ಏಕ್ ಗಂಟ ಏಕ್ ಸಾತ್) ಕಾರ್ಯಕ್ರಮವು  ಪೆÇನ್ನಂಪೇಟೆ  ಮುಖ್ಯ ರಸ್ತೆ ಬದಿಯಲ್ಲಿ ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ  ಶ್ರಮದಾನ ಕೈಗೊಂಡು ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಸ್ವಚ್ಚತಾ ಕಾರ್ಯದಲ್ಲಿ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಎಮ್.ಡಿ.ಶ್ರೀನಿವಾಸ್, ಸಹಾಯಕ ಲೆಕ್ಕಾಧಿಕಾರಿಗಳಾದ ಗಣೇಶ್ ಕುಮಾರ್,  ಎಸ್‍ಬಿಎಂ ಸಂಯೋಜಕರಾದ ಸೂರಜ್ ಹಾಗೂ ತಾ.ಪಂ.ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.