Kodagu

ನಕಲಿ 'ದಿ ಕೂರ್ಗ್ ರೇವ್' ಪಾರ್ಟಿ - ಹಣ ವಸೂಲಿ ಜಾಲದ ಬಗ್ಗೆ ಕೊಡಗು ಪೊಲೀಸರಿಂದ ಎಚ್ಚರಿಕೆ

admincoorgdaily

ನಕಲಿ 'ದಿ ಕೂರ್ಗ್ ರೇವ್' ಪಾರ್ಟಿ - ಹಣ ವಸೂಲಿ ಜಾಲದ ಬಗ್ಗೆ ಕೊಡಗು ಪೊಲೀಸರಿಂದ ಎಚ್ಚರಿಕೆ
ಮಡಿಕೇರಿ: ಹೊರ ಜಿಲ್ಲೆಯ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ "The Coorg Rave - Sep 25-27" ಹೆಸರಿನಲ್ಲಿ ವಾರಾಂತ್ಯದ ಪಾರ್ಟಿ ಆಯೋಜಿಸುತ್ತಿರುವುದಾಗಿ ಪ್ರಚಾರ ಮಾಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ.

ಇಂತಹ ಪಾರ್ಟಿಗಳ ಹಿಂದೆ ಮಾದಕ ದ್ರವ್ಯ ಜಾಲ ಇರುವ ಸಾಧ್ಯತೆ ಇದ್ದು, ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಕೊಡಗು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಮಾದಕ ದ್ರವ್ಯ ಬಳಕೆಯ ಜಾಲದಿಂದ ದೂರವಿರಿ, ಅಪರಿಚಿತರ ಆಕರ್ಷಣೆಗೆ ಒಳಗಾಗಬೇಡಿ ಮತ್ತು ಇಂತಹ ಸಂದೇಶಗಳನ್ನು ಶೇರ್ ಮಾಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಅನುಮಾನಾಸ್ಪದ ಮಾಹಿತಿ ಕಂಡು ಬಂದಲ್ಲಿ ತಕ್ಷಣ 112ಗೆ ಕರೆ ಮಾಡಲು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಸೂಚಿಸಿದ್ದಾರೆ.