Kodagu

ಭತ್ತದಲ್ಲಿ ಬೆಂಕಿ ರೋಗ - ರೈತರಿಗೆ ಎಚ್ಚರಿಕೆ

admincoorgdaily

ಭತ್ತದಲ್ಲಿ ಬೆಂಕಿ ರೋಗ - ರೈತರಿಗೆ ಎಚ್ಚರಿಕೆ
ಮಡಿಕೇರಿ :-2026ರ ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆಗೆ ಅಲ್ಲಲ್ಲಿ ಬೆಂಕಿ ರೋಗದ ಬಾಧೆ ಕಂಡುಬಂದಿದೆ.  ವಿಶೇಷವಾಗಿ ತಡವಾಗಿ ನಾಟಿ ಮಾಡಿದ ಹಾಗೂ ಅತಿ ಹೆಚ್ಚು ಯೂರಿಯಾ ರಸಗೊಬ್ಬರ ನೀಡಲಾದ ಭತ್ತದ ಗದ್ದೆಗಳಲ್ಲಿ ಈ ಬೆಂಕಿ ರೋಗದ ಬಾಧೆ ಹೆಚ್ಚಿಗೆ ಕಂಡುಬಂದಿದೆ.    


ಬೆಂಕಿ ರೋಗದ ಲಕ್ಷಣಗಳು ಎಲೆಯ ಮೇಲ್ಭಾಗದಲ್ಲಿ ಕಂದು/ ಬೂದು ಬಣ್ಣದ  ಚುಕ್ಕೆಗಳು ಪ್ರಥಮ ಹಂತದಲ್ಲಿ  ಕಂಡುಬರುತ್ತವೆ. ನಂತರ  ರೋಗದ ತೀವ್ರತೆ ಹೆಚ್ಚಾದಾಗ ಚುಕ್ಕೆಗಳು ಒಂದಕ್ಕೊಂದು ಸೇರಿಕೊಂಡು ಎಲೆಯ ಪೂರ್ತಿ ಭಾಗಕ್ಕೆ  ಹರಡಿಕೊಳ್ಳುತ್ತವೆ. ಈ ಬೆಂಕಿ ರೋಗವನ್ನು  ಪ್ರಥಮ  ಹಂತದಲ್ಲಿಯೇ  ನಿಯಂತ್ರಿಸದಿದ್ದಲ್ಲಿ  ನಂತರ ತೆನೆ ಕುತ್ತಿಗೆ  ರೋಗ  ಬಂದು  ಬೆಳೆಯ ತೆನೆಗಳು  ಜೊಳ್ಳು ಆಗುವ ಸಂಭವ ಹೆಚ್ಚಿರುತ್ತದೆ. 

ಆದ್ದರಿಂದ ರೈತ ಬಾಂಧವರು ತುರ್ತಾಗಿ ತಮ್ಮ ಭತ್ತದ ಜಮೀನಿಗೆ ಭೇಟಿ ನೀಡಿ ಮೇಲೆ ತಿಳಿಸಿದ ರೋಗದ ಲಕ್ಷಣಗಳು ಕಂಡು ಬಂದಲ್ಲಿ ತುರ್ತಾಗಿ 0.6 ಗ್ರಾಂ ಟ್ರೈಸೈಕ್ಲೋಜೋಲ್ (ಖಿಡಿiಛಿಥಿಛಿಟozoಟe) ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪ್ರತೀ ಎಕರೆಗೆ 200 ರಿಂದ 250 ಲೀಟರ್ ದ್ರಾವಣದ ಅವಶ್ಯಕತೆ ಇರುತ್ತದೆ.  ಹೆಚ್ಚಿನ  ಮಾಹಿತಿಗೆ   ಆಯಾಯ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಸೋಮವಾರಪೇಟೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಾದ ಕೆ.ಪಿ.ವೀರಣ್ಣ ಅವರು ತಿಳಿಸಿದ್ದಾರೆ.