Kodagu

ರಾಜ್ಯಮಟ್ಟದ ಸ್ಪೋರ್ಟ್ ಡ್ಯಾನ್ಸ್‌ನಲ್ಲಿ ಪ್ರಥಮ:ಪೊನ್ನಂಪೇಟೆಯ ಕೌಶಿಕ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

admincoorgdaily

ರಾಜ್ಯಮಟ್ಟದ ಸ್ಪೋರ್ಟ್ ಡ್ಯಾನ್ಸ್‌ನಲ್ಲಿ ಪ್ರಥಮ:ಪೊನ್ನಂಪೇಟೆಯ ಕೌಶಿಕ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಪೊನ್ನಂಪೇಟೆ, ನ 04: ಮೈಸೂರಿನ ಜೆ.ಕೆ. ಮೈದಾನದ ಎಂಎಂಸಿ ಪ್ಲಾಟಿನಂ ಜುಬಿಲಿ ಒಳಾಂಗಣ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ 2026-27ನೇ ಸಾಲಿನ ಕರ್ನಾಟಕ ರಾಜ್ಯಮಟ್ಟದ ಸ್ಪೋರ್ಟ್ ಡ್ಯಾನ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ 7ನೇ ತರಗತಿ ವಿದ್ಯಾರ್ಥಿ ಕೌಶಿಕ್ ಜಿ.ಕೆ. ಅವರು 13 ವರ್ಷ ವಯೋಮಾನದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕೌಶಿಕ್ ಅರುವತ್ತೊಕ್ಲು ಗ್ರಾಮ ಪಂಚಾಯಿತಿ ಸದಸ್ಯೆ ಗೀತಾ ಜಿ ಹಾಗೂ ಕೃಷ್ಣಮೂರ್ತಿ ಜಿ. ದಂಪತಿಯ ಪುತ್ರ.
ವಿದ್ಯಾರ್ಥಿಯ ಈ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ. ವಿಜಯ್ ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡಿ ಪ್ರಶಸ್ತಿ ಗಳಿಸುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.