ಶೈಖ್ ರಿಫಾಈ ಸ್ಮರಣಾರ್ಥ ಎಸ್ವೈಎಸ್ ಸೋಮವಾರಪೇಟೆ ಝೋನ್ ವತಿಯಿಂದ ಅನ್ನಸಂತರ್ಪಣೆ;ಕೂಡಿಗೆ ಶಕ್ತಿ ಆಶ್ರಮದ ನಿವಾಸಿಗಳಿಗೆ ಅನ್ನದಾನ
admincoorgdaily

ನಾಪೋಕ್ಲು :ಸುನ್ನಿ ಯುವಜನ ಸಂಘ (ಎಸ್ವೈಎಸ್) ಸೋಮವಾರಪೇಟೆ ಝೋನ್ ಸಮಿತಿಯ ವತಿಯಿಂದ ಸಾಂತ್ವನ ಕಾರ್ಯಕ್ರಮದ ಅಂಗವಾಗಿ ಔಲಿಯಾಗಳ ನಾಯಕ ಶೈಖ್ ಅಹ್ಮದ್ ರಿಫಾಈ ಅವರ ಸ್ಮರಣಾರ್ಥ ಕೂಡಿಗೆಯ ಶಕ್ತಿ ವೃದ್ಧಾಶ್ರಮದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಎಸ್ವೈಎಸ್ ಸೋಮವಾರಪೇಟೆ ಝೋನ್ ಅಧ್ಯಕ್ಷ ರಶಾದ್ ನೆಲ್ಯಾಹುದಿಕೇರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶ್ರಮವಾಸಿಗಳಿಗೆ ಅನ್ನದಾನ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ವೈಎಸ್ ಕೊಡಗು ಜಿಲ್ಲಾ ಕಲ್ಚರಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ಮಾತನಾಡಿ ರಾಜ್ಯ ಸಮಿತಿಯ ಸುತ್ತೋಲೆಯಂತೆ ಶೈಖ್ ರಿಫಾಈ ಅವರ ಸ್ಮರಣಾರ್ಥ ಈ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಕುಷ್ಠರೋಗದಿಂದ ಬಳಲುತ್ತಿದ್ದ ನಾಯಿಯೊಂದನ್ನು 40 ದಿನಗಳ ಕಾಲ ಆರೈಕೆ ಮಾಡಿ ಸಂಪೂರ್ಣ ಗುಣಮುಖಗೊಳಿಸಿದ ಶೈಖ್ ರಿಫಾಈ ಅವರ ಜೀವನವು ಸಕಲ ಜೀವಿಗಳ ಮೇಲೂ ಕರುಣೆ ತೋರಬೇಕೆಂಬ ಮಹತ್ವದ ಸಂದೇಶವನ್ನು ಸಾರುತ್ತದೆ.ಅವರ ಮಾನವೀಯ ಗುಣಗಳು ಇಂದಿನ ಸಮಾಜಕ್ಕೆ ಮಾದರಿಯಾಗಿವೆ ಎಂದ ಅವರು ಜನವರಿಯಲ್ಲಿ ನಡೆಯುವ ಸಮಸ್ತ ಶತಮಾನೋತ್ಸವದ ಪ್ರಯುಕ್ತ ಕೂಡ ಸಂಘಟನೆಯ ವತಿಯಿಂದ ವಿವಿಧ ಕಾರ್ಯಕ್ರಮವು ಕೂಡ ನಡೆಯಲಿದೆ ಎಂದರು.
ಸಮಾಜದಲ್ಲಿ ಸೇವಾ ಮನೋಭಾವ, ಮಾನವೀಯತೆ ಹಾಗೂ ಪರಸ್ಪರ ಸಹಕಾರವನ್ನು ಬೆಳೆಸುವ ಉದ್ದೇಶದಿಂದ ಎಸ್ವೈಎಸ್ ವತಿಯಿಂದ ಸಾಂತ್ವನ ಕಾರ್ಯಕ್ರಮದ ಭಾಗವಾಗಿ ಈ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಜಿಲ್ಲಾ ಸಮಿತಿಯ ಇಸಾಬ ಉಪಾಧ್ಯಕ್ಷರಾದ ಝುಬೈರ್ ಕೂಡಿಗೆ,ಸಯ್ಯಿದ್ ಶಿಯಾಬ್ ತಂಙಳ್ ಹೊಸತೋಟ,ಎಸ್ವೈಎಸ್ ಸೋಮವಾಪೇಟೆ ಝೋನ್ ಕಾರ್ಯದರ್ಶಿ ರಹೀಮ್ ಹೊಸತೋಟ,ಇಸಾಬ ಕಾರ್ಯದರ್ಶಿ ಸಿದ್ದೀಕ್ ಹೊಸತೋಟ, ಕುಶಾಲನಗರ ಸರ್ಕಲ್ ಅಧ್ಯಕ್ಷ ಹಮೀದ್ ಮುಸ್ಲಿಯಾರ್, ಕೂಡಿಗೆ ಯೂನಿಟ್ ಅಧ್ಯಕ್ಷ ಇಶಾಕ್, ಕಾರ್ಯದರ್ಶಿ ಮೊಹಮ್ಮದ್ ಅಲಿ,ರಫೀಕ್ ಲತೀಫಿ ಸೇರಿದಂತೆ ಝೋನ್ ಹಾಗೂ ಸರ್ಕಲ್ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ :ಝಕರಿಯ ನಾಪೋಕ್ಲು