ದಸರಾ ಅಂಬಾರಿ ಹೊರುವ ಗಜ ಪ್ರಶಾಂತನನ್ನು ಭೇಟಿಯಾದ ಅರಣ್ಯ ಇಲಾಖೆಯ ಅಧಿಕಾರಿಗಳು
admincoorgdaily

ಕುಶಾಲನಗರ, ಅ.16 : ಮೈಸೂರು ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುವ ಪ್ರಶಾಂತ ಆನೆಯನ್ನು ಮೈಸೂರು ಅರಮನೆ ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಭೇಟಿ ಮಾಡಿ, ಆನೆಯ ಆರೋಗ್ಯ ಮತ್ತು ಆರೈಕೆಯ ಕುರಿತು ಮಾಹಿತಿ ಪಡೆದುಕೊಂಡರು.
ದಸರಾ ಮಹೋತ್ಸವದಂತಹ ನಾಡಹಬ್ಬದಲ್ಲಿ ಪ್ರಮುಖ ಪಾತ್ರ ವಹಿಸುವ ಆನೆಗಳ ಪಾಲನೆ, ಪೋಷಣೆ ಹಾಗೂ ಆರೋಗ್ಯದ ಕಾಳಜಿ ವಹಿಸುವುದು ಅರಣ್ಯ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ.
ಭೇಟಿಯ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಕೆ. ಪಿ. ರಂಜನ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್. ರಕ್ಷಿತ್, ಪಶು ವೈದ್ಯ ಮುಜೀಬ್ ರೆಹಮಾನ್, ಪ್ರಭಾರ ಪಶು ವೈದ್ಯ ಆದರ್ಶ್, ಮಾವುತ ಚಿನ್ನಪ್ಪ ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.