State News

ಅರಣ್ಯ ಹುತಾತ್ಮರ ದಿನಾಚರಣೆ: ನವೆಂಬರ್ 1ರೊಳಗೆ ಅಕ್ರಮ ಬಂದೂಕು ಶರಣಾಗತಿಗೆ ಡಿ.ಕೆ. ಶಿವಕುಮಾರ್ ಗಡುವು

admincoorgdaily

ಅರಣ್ಯ ಹುತಾತ್ಮರ ದಿನಾಚರಣೆ: ನವೆಂಬರ್ 1ರೊಳಗೆ ಅಕ್ರಮ ಬಂದೂಕು ಶರಣಾಗತಿಗೆ ಡಿ.ಕೆ. ಶಿವಕುಮಾರ್ ಗಡುವು
ಬೆಂಗಳೂರು:ಅರಣ್ಯ ಭವನದಲ್ಲಿ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿ, ಕರ್ತವ್ಯದ ವೇಳೆ ವೀರಮರಣ ಹೊಂದಿದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮಗೆ ಈ ಹಿಂದೆ ಅರಣ್ಯ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಬೇಕೆಂಬ ಆಸೆಯಿತ್ತು, ನಾನು, ನನ್ನ ಸ್ಥಳ, ನನ್ನ ಕ್ಷೇತ್ರ ಎಲ್ಲವೂ ಅರಣ್ಯ ಪ್ರದೇಶ ಹೀಗೆ ಹಲವು ಹಳೆಯ ನೆನಪನ್ನು ಹಂಚಿಕೊಂಡರು. ಅರಣ್ಯ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರವಾನಗಿ ಇಲ್ಲದೆ ಅಕ್ರಮ ಬಂದೂಕುಗಳನ್ನು ಹೊಂದಿರುವವರು ನವೆಂಬರ್ 1ರೊಳಗೆ ಸ್ವಯಂಪ್ರೇರಿತರಾಗಿ ಶರಣಾಗಿಸಬೇಕು ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು. ಆತ್ಮರಕ್ಷಣೆಗಾಗಿ ಆಯುಧದ ಅಗತ್ಯವಿದ್ದಲ್ಲಿ ನಿಯಮಾನುಸಾರ ಪರಿಶೀಲಿಸಿ ಸೂಕ್ತ ಪರವಾನಗಿ ಒದಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

 ಈ ಸಂದರ್ಭದಲ್ಲಿ ಅರಣ್ಯ ಸಚಿವ ರಾಮಲಿಂಗ ರೆಡ್ಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ( ಸಚಿವ ದರ್ಜೆ) ಟಿ.ಎಂ. ಶಾಹಿದ್ ತೆಕ್ಕಿಲ್ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶ್ಯಾಲೆಟ್ ಪಿಂಟೋ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಅಂಜುಂ ಪರ್ವೇಝ್ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ವಡ್ನಾಳ್ ಜಗದೀಶ್, ತಬರೇಝ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.