Kodagu

ರೈತ ಸಂಪರ್ಕ ಕೇಂದ್ರಕ್ಕೆ ಅರಣ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳ ಭೇಟಿ

admincoorgdaily

ರೈತ ಸಂಪರ್ಕ ಕೇಂದ್ರಕ್ಕೆ ಅರಣ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳ ಭೇಟಿ
ಸಿದ್ದಾಪುರ :-
ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಡಿಕೇರಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೃಷಿ ಇಲಾಖೆಯ ವಿವಿಧ ಯೋಜನೆಗಳು, ಸಹಾಯಧನ, ಬೆಳೆ ವಿಮೆ ಹಾಗೂ ರೈತರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು

ಕೃಷಿ ಅಧಿಕಾರಿ ವರದರಾಜು ಹಾಗೂ ಕೇಂದ್ರದ ಅಕೌಂಟೆಂಟ್ ದಿವ್ಯಾ ಅವರು ವಿದ್ಯಾರ್ಥಿಗಳಿಗೆ ಇಲಾಖೆಯ ಯೋಜನೆಗಳು ಮತ್ತು ರೈತರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ವಿವರಿಸಿದರು ಅರೆಕಾಡು, ಹೊಸಕ್ಕೇರಿ, ಕಟ್ಟೆಮಾಡು ಹಾಗೂ ಮಾರ್ಗೋಡು ಗ್ರಾಮಗಳ ಮಾಹಿತಿಯನ್ನು ಸಂಗ್ರಹಿಸಿದ ವಿದ್ಯಾರ್ಥಿಗಳು, ರೈತರು ಹಾಗೂ ಸರ್ಕಾರಿ ಸೌಲಭ್ಯಗಳ ನಡುವೆ ಮಾಹಿತಿ ಕೊರತೆ ಇರುವುದನ್ನು ಗುರುತಿಸಿದರು

ರೈತರಿಗೆ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ವಿದ್ಯಾರ್ಥಿಗಳು ನಿರ್ಧರಿಸಿದರು. ದೀಕ್ಷಿತ್ ಎಂ.ಬಿ., ಕಿರಣ್ ಎನ್., ಸೊಹೇಲ್ ನದಾಫ್ ಹಾಗೂ ಯೋಗೇಶ್ ಭೇಟಿ ನೀಡಿದ್ದರು.