Kodagu

ಬದ್ರಿಯಾ ಜಮಾಅತ್‌ನ ಮಾಜಿ ಅಧ್ಯಕ್ಷ" ಪ್ರೆಸಿಡೆಂಟ್ ಮಾಮದಾಕ’ ನಿಧನ

admincoorgdaily

ಬದ್ರಿಯಾ ಜಮಾಅತ್‌ನ ಮಾಜಿ ಅಧ್ಯಕ್ಷ" ಪ್ರೆಸಿಡೆಂಟ್ ಮಾಮದಾಕ’ ನಿಧನ
ಮಡಿಕೇರಿ: ನಗರದ ಬದ್ರಿಯಾ ಮಸೀದಿ ಹಾಗೂ ಬದ್ರಿಯಾ ಜಮಾಅತ್‌ನೊಂದಿಗೆ ದೀರ್ಘಕಾಲ ಸೇವೆ ಸಲ್ಲಿಸಿದ್ದ, ಪ್ರೆಸಿಡೆಂಟ್ ಮಾಮದಾಕ
 ಎಂದೇ ಚಿರಪರಿಚಿತರಾಗಿದ್ದ ಹೆಚ್.ಎಂ. ಮೊಹಮ್ಮದ್ (92 ವ) ಅವರು ನಿಧನರಾದರು.

ಆರೋಗ್ಯ ಇಲಾಖೆಯಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು, ಬದ್ರಿಯಾ ಜಮಾಅತ್‌ನ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲದೆ ಅಲ್ ಅಮೀನ್ ಟ್ರಸ್ಟ್‌ನ ಅಧ್ಯಕ್ಷರಾಗಿ ಹಾಗೂ ಇತ್ತೀಚಿನವರೆಗೆ ನಿವೃತ್ತ ಸರ್ಕಾರಿ ನೌಕರರ ಸಂಘ ದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ವಿರಾಜಪೇಟೆಯ ಪೆರುಂಬಾಡಿಯಲ್ಲಿರುವ ಬನಾತ್ ಯತೀಮ್ ಖಾನ ಸಮಿತಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು, ವಿವಿಧ ಸಾಮಾಜಿಕ ಹಾಗೂ ಸಮುದಾಯ ಸೇವಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಮೃತರು ಮೂವರು ಪುತ್ರರಾದ ಇಜಾಝ್, ನಿಸ್ಸಾರ್ ಮತ್ತು ಮನ್ಸೂರ್, ಪುತ್ರಿ ಸಾಹಿರಾ ಬಾನು (ಆಡಿಟರ್ ಹನೀಫ್ ಅವರ ಧರ್ಮಪತ್ನಿ), ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪಾರ್ಥಿವ ಶರೀರವನ್ನು ರಾಣಿಪೇಟೆಯ ಹಬೀಬ್ ಸ್ಟ್ರೀಟ್‌ನ ಲ್ಲಿರುವ ಪುತ್ರಿಯ ನಿವಾಸದಲ್ಲಿ ಇರಿಸಲಾಗಿದ್ದು, ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಸ್ಥಳೀಯ ಖಬರಸ್ತಾನದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.