ಮಲಯಾಳಿ ಸಮುದಾಯದ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ-ಶಾಸಕ ಎ.ಎಸ್.ಪೊನ್ನಣ್ಣ ತೀವ್ರ ಖಂಡನೆ
admincoorgdaily

ಮಡಿಕೇರಿ;
ಮಲಯಾಳಿ ಸಮಾಜದ ಬಗ್ಗೆ ಪ್ರತಾಪ್ ಸಿಂಹ ಅವಹೇಳನಕಾರಿಕಾಗಿಯಾಗಿ ಮಾತನಾಡಿರುವುದನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ತೀವ್ರವಾಗಿ ಖಂಡಿಸಿದ್ದಾರೆ.
ಕೊಡಗಿನ ಏಕತೆಯನ್ನು ಒಡೆಯುವ ಪ್ರತಿಯೊಂದು ಪ್ರಯತ್ನ ವಿಫಲವಾಗಿದೆ. ಇದನ್ನೂ ಕೂಡ ಜನ ತಿರಸ್ಕರಿಸುತ್ತಾರೆ-ಶಾಸಕ ಎ.ಎಸ್.ಪೊನ್ನಣ್ಣ
ಮಲಯಾಳಿ ಸಮುದಾಯ ನಮ್ಮ ನಾಡಿನ ಸಂಸ್ಕೃತಿಯೊಂದಿಗೆ ಮಿಳಿತಗೊಂಡು ನಮ್ಮವರಾಗಿ ಕೊಡಗಿನಲ್ಲಿ ಬದುಕು ಸಾಗಿಸುತ್ತಿದ್ದಾರೆ.
ಮಲಯಾಳಿ ಸಮಾಜದ ಓಣಂ ಹಬ್ಬ ಸೇರಿದಂತೆ ಸಮುದಾಯದ ಎಲ್ಲಾ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ನಾವೆಲ್ಲರೂ ಅತ್ಯಂತ ಸಂಭ್ರಮದಿಂದ ಭಾಗವಹಿಸುತ್ತೇವೆ.
ಓಣಂ ಔತಣಕೂಟದಲ್ಲಿ ಖುಷಿಯಿಂದ ಪಾಲ್ಗೊಂಡು ಹಬ್ಬದ ಸಂತೋಷವನ್ನು ಹಂಚಿಕೊಳ್ಳುತ್ತೇವೆ
ಪ್ರತಾಪ್ ಸಿಂಹ ಹಿಂದಿನಿಂದಲೂ ಕೊಡಗಿನಲ್ಲಿ ಒಡೆದು ಆಳುವ, ಸಮಾಜಗಳ ನಡುವೆ ಒಡಕು ಉಂಟುಮಾಡುವ ಹೇಳಿಕೆಗಳನ್ನೇ ನೀಡಿ ತಮ್ಮ ರಾಜಕೀಯವನ್ನು ಮಾಡುತ್ತಿದ್ದಾರೆ. ಇನ್ನು ಮುಂದೆ ಇವರ ಇಂತಹ ಹೇಳಿಕೆಗಳು ಕೊಡಗಿನ ಜನತೆಯ ಸಾಮರಸ್ಯವನ್ನು ಹಾಳು ಮಾಡಲು ಸಾಧ್ಯವಿಲ್ಲ. ನಾವು ಮಲಯಾಳಿ ಸಮಾಜದ ಹಿತವನ್ನು ಕಾಯುತ್ತೇವೆ ಎಂದು ಶಾಸಕ ಎ.ಎಸ್ ಪೊನ್ನಣ್ಣ ತಿಳಿಸಿದ್ದಾರೆ.