Kodagu

ಬೈಕ್‌ನಲ್ಲಿ ನಾಲ್ವರ ಸವಾರಿ - ವಿಡಿಯೋ ವೈರಲ್: 2000 ರೂ. ದಂಡ ವಿಧಿಸಿದ ಪೊಲೀಸರು

admincoorgdaily

ಬೈಕ್‌ನಲ್ಲಿ ನಾಲ್ವರ ಸವಾರಿ - ವಿಡಿಯೋ ವೈರಲ್: 2000 ರೂ. ದಂಡ ವಿಧಿಸಿದ ಪೊಲೀಸರು
ಮಡಿಕೇರಿ: ಒಂದು ಬೈಕ್‌ನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ, ಒಂದೇ ಬೈಕ್‌ನಲ್ಲಿ ನಾಲ್ವರು ತೆರಳುತ್ತಿದ್ದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿ ವೈರಲ್ ಆಗಿತ್ತು. ವಿಡಿಯೋ ಗಮನಿಸಿದ ಪೊಲೀಸರು ವಾಹನವನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಈ ವಾಹನ ಸವಾರನಿಗೆ ಒಟ್ಟು ರೂ 2000 ದಂಡ ವಿಧಿಸಲಾಗಿದೆ.

ದಂಡದ ವಿವರ:
1.  WITHOUT SIDE MIRROR - 50 ರೂ.
2.  TRIPPLE RIDING - 500 ರೂ.
3.  NOT WEARING HELMET - PILLION RIDER - 500 ರೂ.
4.  RIDING WITHOUT HELMET - 500 ರೂ. (ಒಟ್ಟು ಸೇರಿ ಕೆಲವು ಹೆಚ್ಚುವರಿ ಶುಲ್ಕದೊಂದಿಗೆ ಒಟ್ಟು 2000 ರೂ.)

ಟ್ರಿಪಲ್ ರೈಡಿಂಗ್ ಅಪಾಯಕಾರಿ. ಹೆಲ್ಮೆಟ್ ಧರಿಸಿ, ನಿಯಮ ಪಾಲಿಸಿ, ಸುರಕ್ಷಿತವಾಗಿರಿ ಎಂದು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಮನವಿ ಮಾಡಿದ್ದಾರೆ.