Kodagu

ಕಂಡಕರೆ ಗಾಂಧಿ ಎಫ್.ಸಿ ತಂಡದ ನಾಲ್ವರು ಆಟಗಾರರು ಫುಟ್ಬಾಲ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

admincoorgdaily

ಶಾನಿದ್,ಆಶಿರ್,ಅಫೀಲ್,ಮುಬಶ್ಶಿರ್ಮಡಿಕೇರಿ:ಕೂಡಿಗೆಯಲ್ಲಿ ನಡೆದ ಪದವಿ ಪೂರ್ವ ಕಾಲೇಜು ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕಂಡಕರೆ ಗ್ರಾಮದ ಗಾಂಧಿ ಯುವ ಸಂಘದ ಯುವ ಆಟಗಾರರಾದ ಶಾನಿದ್ ಕೆ.ಎಸ್(ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜು ಮಾದಪುರ), ಅಫೀಲ್ (ಸಂತ ಅನ್ನಮ್ಮ ಕಾಲೇಜು ಸಿದ್ದಾಪುರ) ಹಾಗೂ ಸಿದ್ದಾಪುರದ ಇಕ್ರಾ ಪಬ್ಲಿಕ್ ಕಾಲೇಜಿನ ವಿದ್ಯಾರ್ಥಿಗಳಾದ ಮುಬಶ್ಶಿರ್ ಹಾಗೂ ಆಶಿರ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ನಾಲ್ವರು ಯುವ ಆಟಗಾರರು ಕೊಡಗು ತಂಡವನ್ನು ಪ್ರತಿನಿಧಿಸಲಿದ್ದಾರೆ.ಇವರ ಸಾಧನೆಗೆ ಗಾಂಧಿ‌ ಯುವಕ ಸಂಘ  ಪದಾಧಿಕಾರಿಗಳು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.