ಚೆಂಬು ಗ್ರಾಮದ 9 ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಉಚಿತ ಕೊಳವೆಬಾವಿ: ಶಾಸಕ ಪೊನ್ನಣ್ಣಗೆ ಫಲಾನುಭವಿಗಳಿಂದ ಸನ್ಮಾನ
admincoorgdaily


ಮಡಿಕೇರಿ; ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಚೆಂಬು ಗ್ರಾಮದ ಕುದುರೆಪಾಯ ಭಾಗದ 9 ಪರಿಶಿಷ್ಟ ಪಂಗಡದ ಕುಟುಂಬಗಳ ಬಹು ವರ್ಷಗಳ ನೀರಿನ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ.
ಸರ್ಕಾರದ ವತಿಯಿಂದ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಟ್ಟು ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಟ್ಟ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಗೆ ಇಂದು ಫಲಾನುಭವಿಗಳು ಆತ್ಮೀಯವಾಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಈ ಕಾರ್ಯಕ್ಕೆ ಸಹಕರಿಸಿದ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ಹಾಗೂ ಶಾಸಕರ ವಿಶೇಷ ಅಧಿಕಾರಿ ಬಟ್ಟಕಾಳಂಡ ಮುತ್ತಣ್ಣ ಅವರಿಗೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ವಲಯ ಕಾಂಗ್ರೆಸ್ ಸಮಿತಿ ಸದಸ್ಯರು ಹಾಗೂ ಫಲಾನುಭವಿಗಳಾದ ಕೆ.ಡಿ. ಚನಿಯಪ್ಪ ನಾಯ್ಕ, ವೇಣುಗೋಪಾಲ, ಕೆ.ಕೆ. ಪುರುಷೋತ್ತಮ, ಕೆ.ಐ. ಹೊನ್ನಪ್ಪ, ಕೆ.ಕೆ. ಸದಾಶಿವ, ಈಶ್ವರ ನಾಯ್ಕ (ನೆಲ್ಲಿಕೊಚ್ಚಿ), ಕೆ. ಹರೀಶ್, ರೇವತಿ ರೆಂಗಿಲ್‌ಮೊಟ್ಟೆ ಉಪಸ್ಥಿತರಿದ್ದರು.