ಸುಂಟಿಕೊಪ್ಪದಲ್ಲಿ ಅ.16 ರಂದು ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ
admincoorgdaily

ಸುಂಟಿಕೊಪ್ಪ: ಕೆಎಂಸಿ ಕೊಡಗು ಮೆಡ್ ಸಿಟಿ, ಸುಂಟಿಕೊಪ್ಪದ 2ನೇ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಅಕ್ಟೋಬರ್ 16 ರಂದು ಆಯೋಜಿಸಲಾಗಿದೆ.
ನಮ್ಮ ಸುಂಟಿಕೊಪ್ಪ ಬಳಗದ ಸಹಕಾರದೊಂದಿಗೆ ಭಾರತ್ ಹಾಸ್ಪಿಟಲ್ ಮತ್ತು ಇನ್ ಸ್ಟಿಟ್ಯೂಟ್ ಆಫ್ ಆಂಕಾಲಜಿ ಹಾಗೂ ಕೆಎಂಸಿ ಕೊಡಗು ಮೆಡ್ ಸಿಟಿ ಇವರ ಜಂಟಿ ಸಹಯೋಗದಲ್ಲಿ ಶಿಬಿರ ನಡೆಯಲಿದೆ.
ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಎಂಸಿ ಕೊಡಗು ಮೆಡ್ ಸಿಟಿ ಆವರಣದಲ್ಲಿ ಶಿಬಿರ ನಡೆಯಲಿದ್ದು, ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಹೊಟ್ಟೆ ಕ್ಯಾನ್ಸರ್ ಮತ್ತು ರಕ್ತ ಸಂಬಂಧಿತ ಕ್ಯಾನ್ಸರ್ ತಪಾಸಣೆ ಮಾಡಲಾಗುತ್ತದೆ.
ಬಿಳಿ ಮುಟ್ಟು, ಕೆಂಪು ಮುಟ್ಟು, ಸ್ತನದ ಗಂಟುಗಳು, ವಾಸಿಯಾಗದ ಬಾಯಿಯ ಹುಣ್ಣುಗಳು, ಗಂಟಲು ನೋವು ಇಂತಹ ಲಕ್ಷಣಗಳು ಇರುವವರು ಈ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ಕೋರಿದ್ದಾರೆ.
ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ಮೊ. 9380020827, 8277344877 ಸಂಖ್ಯೆಯನ್ನು ಸಂಪರ್ಕಿಸಬಹುದು.