ಗಾಂಧಿ ಜಯಂತಿಯಂದು ಕೊಡಗಿನ ಗಾಂಧಿ ಸ್ಮರಣೆ: ಪಂದ್ಯಂಡ ಬೆಳ್ಯಪ್ಪ ಮೊಮ್ಮಗಳಿಂದ ಮಾಲಾರ್ಪಣೆ
admincoorgdaily

ಗೋಣಿಕೊಪ್ಪ;
ಗಾಂಧಿ ಜಯಂತಿ ಅಂಗವಾಗಿ ಗೋಣಿಕೊಪ್ಪದ ಸ್ವಾತಂತ್ರ್ಯ ಹೋರಾಟಗಾರ ಕೊಳ್ಳಿಮಾಡ ಕರುಂಬಯ್ಯ ಬಸ್ ನಿಲ್ದಾಣದಲ್ಲಿರುವ ಸಂವಿದಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗು ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ ಪ್ರತಿಮೆಗೆ ಯುನೈಟೆಡ್ ಕೊಡವ ಆರ್ಗನೈಸೇಷನ್ - ಯುಕೊ ವತಿಯಿಂದ ಗೌರವ ಸಲ್ಲಿಸಲಾಯಿತು.
ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅಂಬೇಡ್ಕರ್ ಪ್ರತಿಮೆಗೆ ಹಾಗು ಪಂದ್ಯಂಡ ಬೆಳ್ಯಪ್ಪರವರ ಮೊಮ್ಮಗಳು ಹಾಗು “ಸೋಲ್ ಫುಲ್ ಸೋಜೋರ್ನ್” ಪುಸ್ತಕದ ಲೇಖಕಿ ಬೊಮ್ಮಂಡ ಸವೇರಾ ಚಂಗಪ್ಪ ಸ್ವಾತಂತ್ರ್ಯ ಹೋರಾಟಗಾರ ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ವಿಶೇಷ ನಮನ ಸಲ್ಲಿಸಲಾಯಿತು.
ಈ ಸಂಧರ್ಭ ಮಾತನಾಡಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಅಧ್ಯಾಯದಲ್ಲಿ ಪಂದ್ಯಂಡ ಬೆಳ್ಯಪ್ ಹಾಗು ಸೀತಮ್ಮ ಬೆಳ್ಯಪ್ಪನವರ ಪಾತ್ರ ಅನನ್ಯ, ಅವರೂ ಸೇರಿದಂತೆ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗು ನಿಸ್ವಾರ್ಥ ಸೇವೆಯು ಇಂದಿನ ಪೀಳಿಗೆಯ ಮಾನಸದಿಂದ ಅಳಿಸಿ ಹೋಗಬಾರದೆಂದು ಯುಕೊ ಸಂಸ್ಥೆಯ ವತಿಯಿಂದ “ನೆಪ್ಪುರ ನಳತ್ ಮಾಂಜತ ಮೊಟ್ಟ್” ಎಂಬ ಪರಿಕಲ್ಪನೆಯಲ್ಲಿ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರನ್ನು ನಿರಂತರವಾಗಿ ಸ್ಮರಿಸುವ ಕೆಲಸ ಮಾಡುತ್ತಿದೆ.
ಇದರಿಂದ ಪ್ರೇರಿಪಿತರಾದ ಶಾಸಕ ಪೊನ್ನಣ್ಣನವರ ಕಾಳಜಿಯಿಂದ ಗೋಣಿಕೊಪ್ಪದಲ್ಲಿ ಪ್ರತಿಮೆ ಸ್ಥಾಪನೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕೆ ಸೂಕ್ತ ಗೌರವ ನೀಡುವುದೂ ಸಹ ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮ ದಿನವನ್ನು ಆಚರಿಸುತ್ತಿರುವ ಈ ಸಂಧರ್ಭದಲ್ಲಿ ಜೀವನ ಪರಿಯಂತ ಗಾಂಧಿತತ್ವವನ್ನು ಅಳವಡಿಸಿಕೊಂಡು ಬದುಕಿದ ಕೊಡಗಿನ ಗಾಂಧಿ ಎಂದೇ ಪರಿಚಿತರಾಗಿದ್ದ ಪಂದ್ಯಂಡ ಬೆಳ್ಯಪ್ಪ ನವರ ಪ್ರತಿಮೆಗೂ ಮಾಲಾರ್ಪಣೆ ಮಾಡಿ ಸಮಸ್ತ ನಾಡಿನ ಪರವಾಗಿ ಗೌರವ ಸಲ್ಲಿಸಲಾಗಿದೆ ಎಂದು ಆವರು ಹೇಳಿದರು.
ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಪ್ರತಿಯೊಂದು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನಡೆಯಬೇಕಿದೆ. ಹಾಗು ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಸಿಗುವಂತಾಗಬೇಕು ಈ ನಿಟ್ಟಿನಲ್ಲಿ ಕೊಡಗಿನ ಚುನಾಯಿತ ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ
ಯುಕೊ ಸದಸ್ಯರಾದ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ಪ್ರತಿಮಾ ಕರುಂಬಯ್ಯ. ನೆಲ್ಲಮಕ್ಕಡ ಜಫ್ರಿ ಮಾದಯ್ಯ, ಅಜಿನಿಕಂಡ ತಿಮ್ಮಯ್ಯ, ಕಳ್ಳಿಚಂಡ ದೀನ ಉತ್ತಪ್ಪ ಹಾಗು ಇತರರು ಹಾಜರಿದ್ದರು.