Kodagu

ವಿರಾಜಪೇಟೆಯಲ್ಲಿ ಗಾಂಧಿ-ಶಾಸ್ತ್ರಿ ಜಯಂತಿ ಆಚರಣೆ: ಶಾಸಕ ಪೊನ್ನಣ್ಣ ಭಾಗಿ

admincoorgdaily

ವಿರಾಜಪೇಟೆಯಲ್ಲಿ ಗಾಂಧಿ-ಶಾಸ್ತ್ರಿ ಜಯಂತಿ ಆಚರಣೆ: ಶಾಸಕ ಪೊನ್ನಣ್ಣ ಭಾಗಿ
ವಿರಾಜಪೇಟೆ: ಗಾಂಧಿ ಜಯಂತಿಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಆಚರಿಸಿದರು.

ವಿರಾಜಪೇಟೆಯ ಗೃಹ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶಾಸಕರು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕೆಚ್ಚೆದೆಯ ಹೋರಾಟವನ್ನು ಸ್ಮರಿಸಿದರು. ಮಹಾತ್ಮರ ತತ್ವಗಳನ್ನು ಆದರ್ಶವಾಗಿ ತೆಗೆದುಕೊಂಡು ಪಾಲಿಸಿದರೆ ಅವರ ಪ್ರಯತ್ನಕ್ಕೆ ಸಾರ್ಥಕತೆ ದೊರೆಯುತ್ತದೆ ಹಾಗೂ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಉಪಾಧ್ಯಕ್ಷ ಜೋಕಿಮ್, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಪ್ರಚಾರ ಸಮಿತಿ ಅಧ್ಯಕ್ಷ ಮತಿನ್, ಪಕ್ಷದ ಮುಖಂಡರುಗಳಾದ ಅಜ್ಜಿಕುಟ್ಟಿರ ಪೊನ್ನು, ಕೋಡಿರ ವಿನೋದ್ ನಾಣಯ್ಯ, ಮಹದೇವ್, ಕುಂಡಚ್ಚಿರ ಮಂಜು ದೇವಯ್ಯ, ಉದಯ್ ಮಾದಪ್ಪ, ಅಪ್ಪೂರವೀಂದ್ರ, ಆದಿತ್ಯ ಪೆಮ್ಮಯ್ಯ, ಜಾಫರ್, ನಾಸಿರ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಕ್ಷಿತ್ ಚಂಗಪ್ಪ, ವಿರಾಜಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಬೀರ್, ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಡಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಬಳಿಕ ಹಾತೂರು ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿದರು. ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ಕೊಕ್ಕಂಡ ರೋಷನ್, ಬೂತ್ ಅಧ್ಯಕ್ಷ ಪುಲಿಯಂಡ ರೋಷನ್ ಉಪಸ್ಥಿತರಿದ್ದರು.