Kodagu

ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಕಾಲೇಜಿನಲ್ಲಿ ಶ್ರಮದಾನದ ಮೂಲಕ ಗಾಂಧೀಜಿ, ಶಾಸ್ತ್ರಿ ಜಯಂತಿ ಆಚರಣೆ

admincoorgdaily

ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಕಾಲೇಜಿನಲ್ಲಿ ಶ್ರಮದಾನದ ಮೂಲಕ  ಗಾಂಧೀಜಿ, ಶಾಸ್ತ್ರಿ ಜಯಂತಿ ಆಚರಣೆ
ಸೋಮವಾರಪೇಟೆ:
ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ  ಕಾಲೇಜಿನಲ್ಲಿ ಅ.2 ರಂದು (ಶುಕ್ರವಾರ) ರಾಷ್ಟ್ರಪಿತ ಮಹಾತ್ಮ ಗಾಂಧೀ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. 

ಸಂಸ್ಥೆಯ ಇತಿಹಾಸ ಉಪನ್ಯಾಸಕ ಮೋಹನ್ ಹೆಗ್ಡೆ ಮಾತನಾಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿಯವರ ಹೋರಾಟದ ಹಾದಿ ಕುರಿತು ಮಾತನಾಡುತ್ತಾ ಗಾಂಧೀಜಿಯವರ ಹೋರಾಟ ಕೇವಲ ಸ್ವಾತಂತ್ರ ಕ್ಕಾಗಿ ಮಾತ್ರವಲ್ಲದೆ ಸ್ವಚ್ಛತೆಯ ಅಭಿಯಾನ ವನ್ನು ಕೈ ಗೊಂಡಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯು ಗಾಂಧೀಜಿ ಅವರ ಕನಸಿನ ಕೂಸಾಗಿದ್ದು ವಿದ್ಯಾರ್ಥಿಗಳು ನಿಸ್ವಾರ್ಥ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಅಲ್ಲದೆ ಲಾಲ್ ಬಹುದ್ದೂರ್ ಶಾಸ್ತ್ರಿಯವರ  ಭಾರತ ಪಾಕ್ ಯುದ್ಧದ ಸಂದರ್ಭ ಅವರ ದಿಟ್ಟ ನಿಲುವು ಪ್ರಾಮಾಣಿಕತೆ ಕೆಚ್ಚೆದೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. 

ಅಲ್ಲದೆ ಎರಡನೇ ಪ್ರಧಾನಿಯಾಗಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ ಅವರ ಚತುರತೆಯ ಕುರಿತು ಮಾತನಾಡಿದರು.  
ದಿನದ ಅಂಗವಾಗಿ ಸಂಸ್ಥೆಯ ಪ್ರಾಂಶುಪಾಲ  ಸಿ ಜಿ ಮಂದಪ್ಪ ಸೇರಿದಂತೆ ಎಲ್ಲಾ ಭೋದಕ ಬೋಧಕೇತರ ವರ್ಗ,
ಎಲ್ಲಾ ವಿದ್ಯಾರ್ಥಿಗಳು ಹಾಗೂ   ಶ್ರಮದಾನದ ಮೂಲಕ ಶಾಲಾ ಆವರಣ ಮತ್ತು ವಿಶಾಲ ಆಟದ ಮೈದಾನ ಹಾಗೂ ರಸ್ತೆಯ ಇಕ್ಕೆಲದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಿಸಲಾಯಿತು. ಮೈದಾನದ ಸುತ್ತ ಮುತ್ತ ಬೆಳೆದಿದ್ದ  ಗಿಡ ಗಂಟಿ ಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ನಂತರ ಸಂಸ್ಥೆಯ ವತಿಯಿಂದ ಎಲ್ಲರಿಗೂ ಮಧ್ಯಾಹ್ನದ ಲಘು ಉಪಹಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.