ಮಾದಾಪುರ ಡಿ.ಚೆನ್ನಮ್ಮ ಕಾಲೇಜಿನಲ್ಲಿ ಪ್ರೌಢಶಾಲಾ ಮಕ್ಕಳಿಂದ ಗಣೇಶ ಮೂರ್ತಿ ತಯಾರಿಕೆ
admincoorgdaily

ಸುಂಟಿಕೊಪ್ಪ, ಸೆ.13:
ತಾಲ್ಲೂಕಿನ ಮಾದಾಪುರ ಶ್ರೀಮತಿ ಡಿ ಚೆನ್ನಮ್ಮ ಪಿಯೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಾರಂಗಿ ಜಲಾನಯನ ಪರಿಸರ ಸಂಘದ ವತಿಯಿಂದ ಶನಿವಾರ ಶಾಲೆಯಲ್ಲಿ ಹಸಿರು ಅಭಿಯಾನದಡಿ ಪರಿಸರ ಸ್ನೇಹಿ
ಗಣೇಶೋತ್ಸವ ಆಚರಿಸಲಾಯಿತು.
ಶಾಲೆಯಲ್ಲಿ 8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಮಣ್ಣಿನಿಂದ ವಿವಿಧ ಮಾದರಿಯ ಗಣೇಶ ಮೂರ್ತಿಗಳನ್ನು ತಯಾರಿಸಿ ಗಮನ ಸೆಳೆದರು.
ಪ್ರೌಢಶಾಲಾ ವಿಭಾಗದ
ಶಾಲೆಯ ಹಿರಿಯ ಶಿಕ್ಷಕಿ ಕೆ.ಯು.ರೀಟಾ ಮಾತನಾಡಿ,
ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.
ಪರಿಸರ ಸ್ನೇಹಿ ಗಣೇಶ ಹಬ್ಬದ ಕುರಿತು ಮಾತನಾಡಿದ
ಇಕೋ ಕ್ಲಬ್ ಉಸ್ತುವಾರಿ
ಶಿಕ್ಷಕಿ ಕೆ.ಎಸ್.ಅಶ್ವಿನಿ ,
ರಾಸಾಯನಿಕ ಬಣ್ಣದ ಗಣೇಶ ಮೂರ್ತಿಗಳನ್ನು ನದಿ, ಕೆರೆ ಮತ್ತಿತರ ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ಜಲಚರಗಳು ಸೇರಿದಂತೆ ಜಲ ಮಾಲಿನ್ಯ ಉಂಟಾಗುವುದನ್ನು ತಡೆಗಟ್ಟುವ ದಿಸೆಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಪ್ರತಿಷ್ಠಾಪಿಸಲು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಶಾಲೆಯ ಶಿಕ್ಷಕರಾದ ಜಿ.ಸಿ.ಬಸವರಾಜ್, ಟಿ.ಪಿ.ಹರಿಣಿ ಮತ್ತು ವಿದ್ಯಾರ್ಥಿಗಳು ಇದ್ದರು.