ಗೌರಿ-ಗಣೇಶ ವಿಸರ್ಜನೆ: ಕೊಡಗು ಜಿಲ್ಲೆಯ ವಿವಿಧೆಡೆ ಸೆ.18 ರಿಂದ ಅ.11 ರವರೆಗೆ ಮದ್ಯ ಮಾರಾಟ ಬಂದ್: ಜಿಲ್ಲಾಧಿಕಾರಿ ಆದೇಶ
admincoorgdaily

ಮಡಿಕೇರಿ, ಸೆ.17:ಕೊಡಗು ಜಿಲ್ಲೆಯಲ್ಲಿ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು 14 ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
*ಪ್ರಸ್ತಾವನೆ:* ದಿನಾಂಕ 18/09/2026 ರಿಂದ 11/10/2026 ರವರೆಗೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಗೌರಿ-ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ನಡೆಯಲಿದ್ದು, ಸದರಿ ಕಾರ್ಯಕ್ರಮಗಳ ಅಂಗವಾಗಿ ಮಂಚವಣಿಗೆಯಲ್ಲಿ ನಗರ/ಪಟ್ಟಣಗಳ ಮುಖ್ಯ ರಸ್ತೆಯಲ್ಲಿ, ಹಾಗೂ ಹೊರಗಡೆ, ಸದರಿ ಮಾರ್ಗಗಳಲ್ಲಿ ಹಿಂಸಾತ್ಮಕವಾಗಿ ಭಾವೋದ್ವೇಗ/ಉನ್ಮಾದದಿಂದ ನಡೆಯಬಹುದಾದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ಇದ್ದು, ಶಾಂತಿ ಕಾಪಾಡಲು ಮದ್ಯ ಮಾರಾಟ ನಿಷೇಧಿಸುವಂತೆ ಪೊಲೀಸ್ ಅಧೀಕ್ಷಕರು ಮನವಿ ಮಾಡಿದ್ದರು. ಅದರಂತೆ ಅಬಕಾರಿ ಕಾಯ್ದೆ 1965ರ ಕಲಂ 21ರ ಪ್ರಕಾರ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.
*ಸಂಪೂರ್ಣ ನಿಷೇಧದ ಪಟ್ಟಿ (ಮಧ್ಯಾಹ್ನ 3 ರಿಂದ ರಾತ್ರಿ 12 ರವರೆಗೆ):*
1. *ದಿನಾಂಕ 18/09/2026:* ಬೆಟ್ಟಗೇರಿ ಗ್ರಾಮ ಪಂಚಾಯತ್, ಗೋಣಿಕೊಪ್ಪ ಗ್ರಾಮ ಪಂಚಾಯತ್ 15 ಕಿ.ಮೀ ವ್ಯಾಪ್ತಿ ಮತ್ತು ನಾಪೋಕ್ಲು ಗ್ರಾಮ ಪಂಚಾಯತ್ 03 ಕಿ.ಮೀ ವ್ಯಾಪ್ತಿ.
2. *ದಿನಾಂಕ 20/09/2026:* ಮಾದಾಪುರ ಗ್ರಾಮ ಪಂಚಾಯತ್ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿ, ಮೂರ್ನಾಡು ಪಟ್ಟಣದ ಸುತ್ತ 03 ಕಿ.ಮೀ ವ್ಯಾಪ್ತಿ, ಸಿದ್ದಾಪುರ, ನೆಲ್ಲಿಹುದಿಕೇರಿ, ಪಾಲಿಬೆಟ್ಟ, ಚೆನ್ನಯ್ಯನಕೋಟೆ ಸುತ್ತಮುತ್ತಲಿನ 05 ಕಿ.ಮೀ ವ್ಯಾಪ್ತಿ ಮತ್ತು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅರಮಟ್ಟಿ ಗ್ರಾಮದ ಸುತ್ತ 06 ಕಿ.ಮೀ ವ್ಯಾಪ್ತಿ.
3. *ದಿನಾಂಕ 21/09/2026:* ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಬಾಳಲೆ ನಗರ, ಪೊನ್ನಂಪೇಟೆ ನಗರ, ಕಾನೂರು ಹಾಗೂ ಶ್ರೀಮಂಗಲ ಠಾಣಾ ವ್ಯಾಪ್ತಿಯ ಹುದಿಕೇರಿ ಗ್ರಾಮ ಪಂಚಾಯತ್ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿ.
4. *ದಿನಾಂಕ 22/09/2026:* ಬೆಟ್ಟಗೇರಿ ಗ್ರಾಮ ಪಂಚಾಯತ್ 03 ಕಿ.ಮೀ ವ್ಯಾಪ್ತಿ.
5. *ದಿನಾಂಕ 23/09/2026:* ಸುಂಟಿಕೊಪ್ಪ, ಕೊಡಗರಹಳ್ಳಿ ಹಾಗೂ 7ನೇ ಹೊಸಕೋಟೆ ಗ್ರಾಮ ಪಂಚಾಯತ್ ಸುತ್ತಮುತ್ತಲಿನ 04 ಕಿ.ಮೀ ವ್ಯಾಪ್ತಿ, ಪೊನ್ನಂಪೇಟೆ ನಗರ, ಗೋಣಿಕೊಪ್ಪ ನಗರ, ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾನೂರು, ಬಾಳಲೆ, ಶ್ರೀಮಂಗಲ ಠಾಣಾ ವ್ಯಾಪ್ತಿಯ ಹುದಿಕೇರಿ ಗ್ರಾಮ ಪಂಚಾಯತ್ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿ.
6. *ದಿನಾಂಕ 24/09/2026:* ಸೋಮವಾರಪೇಟೆ ನಗರದ ಸುತ್ತಮುತ್ತಲಿನ 03 ಕಿ.ಮೀ ವ್ಯಾಪ್ತಿ.
7. *ದಿನಾಂಕ 25/09/2026:* ವಿರಾಜಪೇಟೆ ನಗರದ ಸುತ್ತಮುತ್ತಲಿನ 15 ಕಿ.ಮೀ ವ್ಯಾಪ್ತಿ.
8. *ದಿನಾಂಕ 26/09/2026:* ಮಾದಾಪುರ ಪಂಚಾಯತ್, ಚೆಟ್ಟಳ್ಳಿ ಗ್ರಾಮ ಪಂಚಾಯತ್ ಸುತ್ತಮುತ್ತಲಿನ 03 ಕಿ.ಮೀ ವ್ಯಾಪ್ತಿ, ಮಡಿಕೇರಿ ನಗರದ ಸುತ್ತಮುತ್ತಲಿನ 02 ಕಿ.ಮೀ ವ್ಯಾಪ್ತಿ.
9. *ದಿನಾಂಕ 27/09/2026:* ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಅಮ್ಮತ್ತಿ, ಕಾಮಾರು ಸುತ್ತಮುತ್ತಲಿನ 06 ಕಿ.ಮೀ ವ್ಯಾಪ್ತಿ.
10. *ದಿನಾಂಕ 28/09/2026:* ಚೆಟ್ಟಳ್ಳಿ ಗ್ರಾಮ ಪಂಚಾಯತ್ ಸುತ್ತಮುತ್ತಲಿನ 03 ಕಿ.ಮೀ ವ್ಯಾಪ್ತಿ.
11. *ದಿನಾಂಕ 03/10/2026:* ಪಾಲಿಬೆಟ್ಟ ಗ್ರಾಮ ಪಂಚಾಯತ್ ಸುತ್ತಮುತ್ತಲಿನ 05 ಕಿ.ಮೀ ವ್ಯಾಪ್ತಿ.
12. *ದಿನಾಂಕ 04/10/2026:* ಸಿದ್ದಾಪುರ ಮತ್ತು ನೆಲ್ಲಿಹುದಿಕೇರಿ ಗ್ರಾಮ ಪಂಚಾಯತ್ ಸುತ್ತಮುತ್ತಲಿನ 05 ಕಿ.ಮೀ ವ್ಯಾಪ್ತಿ.
13. *ದಿನಾಂಕ 09/10/2026:* ಸಿದ್ದಾಪುರ ಮತ್ತು ನೆಲ್ಲಿಹುದಿಕೇರಿ ಗ್ರಾಮ ಪಂಚಾಯತ್ ಸುತ್ತಮುತ್ತಲಿನ 05 ಕಿ.ಮೀ ವ್ಯಾಪ್ತಿ.
14. *ದಿನಾಂಕ 11/10/2026:* ಸಿದ್ದಾಪುರ, ನೆಲ್ಲಿಹುದಿಕೇರಿ, ಪಾಲಿಬೆಟ್ಟ ಮತ್ತು ಚೆನ್ನಯ್ಯನಕೋಟೆ ಗ್ರಾಮ ಪಂಚಾಯತ್ ಸುತ್ತಮುತ್ತಲಿನ 05 ಕಿ.ಮೀ ವ್ಯಾಪ್ತಿ.