ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಗೌರಿ ಗಣೇಶೋತ್ಸವ
admincoorgdaily

ವಿರಾಜಪೇಟೆ:
ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 44ನೇ ವರ್ಷದ ಗೌರಿ ಗಣೇಶೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಗೌರಿ ಗಣೇಶ ಹಬ್ಬದ ಪ್ರಯುಕ್ತ ಬೆಳಗಿನಿಂದಲೇ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳು ಆರಂಭವಾದವು. ಅರ್ಚಕರು ಮೊದಲಿಗೆ ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಮಹಾ ಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ವನದುರ್ಗೆ ,ಶ್ರೀ ನಾಗ ದೇವರುಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
ತದನಂತರ ದೇವಸ್ಥಾನದಲ್ಲಿ ಶ್ರೀ ಗಣಪತಿ ಹೋಮವನ್ನು ನೆರವೇರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ಅರ್ಚಕ ವಾಮನ ಮೂರ್ತಿ ಭಟ್ ರವರ ನೇತೃತ್ವದಲ್ಲಿ ಶ್ರೀ ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯು ದೇವಸ್ಥಾನದಲ್ಲಿ ಜರುಗಿತು. ಅರ್ಚಕರು ಶ್ರೀ ಗೌರಿ ಗಣೇಶ ಮೂರ್ತಿಯನ್ನು ಮಹಾ ಗಣಪತಿ ದೇವಸ್ಥಾನದ ಗುಡಿಯಲ್ಲಿ ಪ್ರತಿಷ್ಠಾಪನೆಯನ್ನು ಮಾಡಿದರು. ಪ್ರತಿಷ್ಠಾಪನೆ ಬಳಿಕ ಶ್ರೀ ಗೌರಿ ಗಣೇಶ ಸ್ವಾಮಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ಪುಷ್ಪಾರ್ಚನೆ ,ಕುಂಕುಮಾರ್ಚನೆ ಗೌರಿ ಗಣೇಶ ನಾಮಾವಳಿ ಸ್ತುತಿ, ಅಭಿಷೇಕ ಸೇವೆಗಳು, ನೈವೇದ್ಯ ಅಭಿಷೇಕ, ಹಾಗೂ ಇನ್ನಿತರ ಧಾರ್ಮಿಕ ಸೇವೆಗಳನ್ನು ಅರ್ಚಕರು ನೆರವೇರಿಸಿದರು. ನಡೆದಿದ್ದ ಭಕ್ತಾದಿಗಳು ಶ್ರೀ ಗಣಪತಿ ಪೂಜೆಯ ಸೇವೆಯನ್ನು ಮಾಡಿಸಿದರು. ಪೂಜಾ ಕಾರ್ಯಕ್ರಮಗಳ ಬಳಿಕ ಅರ್ಚಕರು ವಿಶೇಷ ಪ್ರಾರ್ಥನೆಯನ್ನು ಮಾಡಿ ಮಹಾ ಮಂಗಳಾರತಿಯನ್ನು ನೆರವೇರಿಸಿದರು. ತದನಂತರ ಪ್ರಸಾದ ವಿತರಣೆ ಹಾಗೂ ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಸೇವೆಯು ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಪಿ ಸಂತೋಷ್, ಉಪಾಧ್ಯಕ್ಷರುಗಳಾದ ಬಿ.ಜಿ ನಂದ, ಶೈಲೇಶ್ ಬಿ .ಎಂ, ಕಾರ್ಯದರ್ಶಿ ಬಿ. ಎನ್ ಶಾಂತಿಭೂಷಣ್, ಖಜಾಂಚಿ ಜ್ಯೋತಿ, ಗ್ರಾಮದ ಹಿರಿಯರಾದ ಬಿ .ವಿ ಭವಾನಿ ಶಂಕರ್ ಬೋರ್ಕರ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು. ಬೇಟೋಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.