ಅರ್ವತ್ತೋಕ್ಲುವಿನಲ್ಲಿ ಹುಲಿಹೆಜ್ಜೆ ಪತ್ತೆ;ಗ್ರಾಮದ ಜನರಲ್ಲಿ ಆತಂಕ
admincoorgdaily

ಮಡಿಕೇರಿ ;ತಾಲೂಕಿನ ಅರ್ವತ್ತೋಕ್ಲು ಗ್ರಾಮದಲ್ಲಿ ಇಂದು ಬೆಳಿಗ್ಗೆ ಅನೇಕ ಕಡೆಗಳಲ್ಲಿ ಹುಲಿ ಹೆಜ್ಜೆ ಕಾಣಿಸಿದ್ದು ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಗ್ರಾಮದ ಪೂಜಾರಿರ ಕುಟುಂಬಸ್ಥರ ಗದ್ದೆ ಹಾಗೂ ಮನೆಯ ಸುತ್ತ ಮುತ್ತ ಹುಲಿ ಹೆಜ್ಜೆ ಕಂಡು ಬಂದಿದೆ.ದೊಡ್ಡ ಗಾತ್ರದ ಹೆಜ್ಜೆಯ ಗುರುತು ಇದ್ದು ಬಲಾಢ್ಯ ಹುಲಿ ಆಗಿರುವ ಸಾಧ್ಯತೆ ಕಂಡು ಬಂದಿದೆ.
ಅರ್ವತ್ತೋಕ್ಲು ಗ್ರಾಮದ ಸುತ್ತ ಮುತ್ತ ಯಾವುದೇ ಅರಣ್ಯ ಪ್ರದೇಶ ಇರುವುದಿಲ್ಲ.
ಸಂಪೂರ್ಣವಾಗಿ ಕೃಷಿ ಪ್ರದೇಶ ಹೊಂದಿರುವ ಗ್ರಾಮವಾಗಿದ್ದು ಹುಲಿ ಕಾಫಿ ತೋಟದಲ್ಲಿ ಇರುವ ಸಂಭವ ಇದ್ದು ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಕೂಡಲೇ ಅರಣ್ಯ ಇಲಾಖೆಯವರ ಹುಲಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸಬೇಕು ಎಂದು ಗ್ರಾಮಸ್ಥರು ಆಗಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಶಿವಕುಮಾರ್ ರವರು ಮಾಹಿತಿ ಸಂಗ್ರಹಿಸಿದ್ದು ಹುಲಿ ಕಾರ್ಯಾಚರಣೆ ಪಡೆ ಸ್ಥಳಕ್ಕೆ ತೆರಳುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.