Kodagu

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಮಾನ ಮಹತ್ವ ನೀಡಿ: ನ್ಯಾ. ವಿಶ್ವನಾಥ್ ಕರೆ

admincoorgdaily

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಮಾನ ಮಹತ್ವ ನೀಡಿ: ನ್ಯಾ. ವಿಶ್ವನಾಥ್ ಕರೆ
ವಿರಾಜಪೇಟೆ;
ದೈಹಿಕ ಆರೋಗ್ಯಕ್ಕೆ ಎಷ್ಟು ಮಹತ್ವ ನೀಡುತ್ತೇವೇಯೋ ಮಾನಸಿಕ ಆರೋಗ್ಯಕ್ಕೂ ಅಷ್ಟೇ ಮಹತ್ವ ನೀಡಿದಾಗ ಪರಿಪೂರ್ಣ ಆರೋಗ್ಯಯುತ ಜೀವನ ನಮ್ಮದಾಗುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯದೀಶರು ಮತ್ತು ಜೆ.ಎಂ. ಎಫ್.ಸಿ ವಿರಾಜಪೇಟೆ  ನ್ಯಾ.ಎ. ವಿಶ್ವನಾಥ್  ಅಭಿಪ್ರಾಯ ವ್ಯಕ್ತ ಪಡಿಸಿದರು.


ವಿರಾಜಪೇಟೆ ಕಾವೇರಿ ಕಾಲೇಜು , ತಾಲೂಕು ಕಾನೂನು ಸೇವಾ ಸಮಿತಿ , ವಕೀಲರ ಸಂಘ ವಿರಾಜಪೇಟೆ  ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ  ಸೋಮವಾರ ಆಯೋಜಿಸಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ  2026 ರನ್ನು ದೀಪ ಬೆಳಗಿಸುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು  ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚಿನವರು ಡೈಯಟ್, ವ್ಯಾಯಾಮದ ಮೂಲಕ ದೈಹಿಕ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುತಿದ್ದಾರೆ. ಇದರೊಂದಿಗೆ ಮಾನಸಿಕ ಆರೋಗ್ಯ ಕಾಪಾಡುವ ಕಡೆಯು ಗಮನ ಹರಿಸುದು ಅಷ್ಟೇ ಮುಖ್ಯವಾಗಿದೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ  ವಿದ್ಯಾರ್ಥಿ ಜೀವನ ಹಾಗೂ ಉದ್ಯೋಗಿ ಜೀವನದಲ್ಲಿ ಒತ್ತಡ ಎಂಬುದು  ಸರ್ವೆ ಸಾಮಾನ್ಯ. ಒತ್ತಡಕ್ಕೆ ಒಳಗಾಗಿ ಒದ್ದಾಡದೆ, ಮಾನಸಿಕವಾಗಿ ಕುಗ್ಗದೆ . ಒತ್ತಡವನ್ನು ನಿವಾರಿಸಿ ಅದರಿಂದ ಹೊರ ಬಂದು ಬದುಕುದನ್ನು ಕಲಿಯಬೇಕು . ದೈಹಿಕವಾಗಿ ಎಷ್ಟು ಆರೋಗ್ಯವಂತರಾಗಿರುತ್ತೇವೆಯೋ ಮಾನಸಿಕವಾಗಿ ಅಷ್ಟೇ ಆರೋಗ್ಯವಂತರಾಗಿರೋದು ಬಹಳ ಮುಖ್ಯ. ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡು ಇದ್ದಾಗ ಮಾತ್ರ ಅದು ಆರೋಗ್ಯಯುತ ಜೀವನವಾಗಲು ಸಾಧ್ಯ ಎಂದರು .


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮನೋವೈದ್ಯ ಡಾ.ಡೆವಿನ್ ಮಾತನಾಡಿ ಮಾನಸಿಕವಾಗಿ ಬಳಲುವವರು ನಮ್ಮ ಸುತ್ತಮುತ್ತ ಇರುತ್ತಾರೆ ಅವರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು. ಅವರ ವರ್ತನೆ , ಮಾತನಾಡುವ ಶೈಲಿ ,ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ನೋಡಿ ಅವರ ಸಮಸ್ಯೆ ಅರಿಯ ಬೇಕು. ಮಾನಸಿಕ ಒತ್ತಡಕ್ಕೆ ಒಳಗಾದವರಲ್ಲಿ ದೈಹಿಕವಾಗಿ ತಲೆ, ಹೊಟ್ಟೆ , ಅಂಗಾಂಗ ನೋವು , ಭಾವನಾತ್ಮಕವಾಗಿ ಅಳುದು , ನಗುದು , ಕಿರುಚುದು , ಅಳುದು  ಹಾಗೂ ವರ್ತನೆಗಳಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ.  ಯುವ ಜನರಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು ವಿವಿಧ ಕಾರಣ , ಸಮಯ , ಸನ್ನೀವೇಶಗಳಿಂದ ಒತ್ತಡಕ್ಕೆ ಒಳಗಾಗಿ ಮುಂದೆ ವ್ಯಸನಕ್ಕೆ ಒಳಗಾಗುತ್ತಾರೆ.  ಇಂತಹ ಸಂದರ್ಭ ಸೂಕ್ತ ಸಮಾಲೋಚನೆ ಚಿಕಿತ್ಸೆ ದೊರೆಯದೆ ಹೋದರೆ ಮುಂದೆ ಕಿನ್ನತೆಗೆ ಒಳಗಾಗಿ ಅಸಾಯಕತೆ ಮೂಡಿ  ನನ್ನ ಜೀವ ನಿಷ್ಪ್ರಯೋಜಕ ಎಂಬ ಭಾವನೆ ಬೆಳೆದು ಆತ್ಮಹತ್ಯೆಗೆ ಯತ್ನಿಸುತ್ತಾರೆ ಇಂತಹ ಲಕ್ಷಣಗಳು ಇದ್ದಲ್ಲಿ ತಕ್ಷಣ ಅಂಥವರನ್ನು ಗುರುತಿಸಿ  ಹೇಗೆ ದೈಹಿಕ ಕಾಯಿಲೆಗಳಿಗೆ ವೈದ್ಯರ ಮೂಲಕ ಔಷದಿ ಪಡೆಯುತ್ತೇವೇಯೋ ಹಾಗೆಯೆ ಮಾನಸಿಕ ಸಮಸ್ಯೆಗಳಿಗೆ ಆಪ್ತ ಸಮಾಲೋಚನೆ ಹಾಗೂ ಸೂಕ್ತ ಚಿಕಿತ್ಸೆ ಕೊಡಿಸಿ ಅವರ ಜೀವ , ಜೀವನ ಉಳಿಸುವ ಕೆಲಸ ಮಾಡಬೇಕೆಂದರು. .

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಜಿ.ವೀಣಾ ಮಾತನಾಡಿದರು. ವೇದಿಕೆಯ ಮೇಲೆವಕೀಲರ ಸಂಘದ ಅಧ್ಯಕ್ಷ ಸಿ.ಕೆ. ಪೂವಣ್ಣ,ವಕೀಲರು ಮತ್ತು ನೋಟರಿ ರಮೇಶ್  ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ  ಪದವಿ . ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು