Kodagu

ಬಿ.ಶೆಟ್ಟಿಗೇರಿಯಲ್ಲಿ ನಿವೇಶನ ರಹಿತ ಎಸ್‌ಟಿ ಕುಟುಂಬಗಳಿಗೆ ಮೊದಲ ಆದ್ಯತೆ ನೀಡಿ: ಡಿಎಸ್‌ಎಸ್ ಒತ್ತಾಯ

admincoorgdaily

ಬಿ.ಶೆಟ್ಟಿಗೇರಿಯಲ್ಲಿ ನಿವೇಶನ ರಹಿತ ಎಸ್‌ಟಿ ಕುಟುಂಬಗಳಿಗೆ ಮೊದಲ ಆದ್ಯತೆ ನೀಡಿ: ಡಿಎಸ್‌ಎಸ್ ಒತ್ತಾಯ
ಮಡಿಕೇರಿ: ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ.ನಂ. ೩೭/೨೬ರ ಪೈಸಾರಿ ಜಾಗವನ್ನು ಮೊದಲು ಸ್ಥಳೀಯ ನಿವೇಶನ ರಹಿತ ಎಸ್‌ಟಿ ಕುಟುಂಬಗಳಿಗೆ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ(ಡಿಎಸ್‌ಎಸ್) ಜಿಲ್ಲಾ ಸಂಚಾಲಕ ಹೆಚ್.ಆರ್.ಪರಶುರಾಮ್ ಒತ್ತಾಯಿಸಿದ್ದಾರೆ.

ಈ ಜಾಗದಲ್ಲಿ ಕಳೆದ ಅರ್ಧ ವರ್ಷದಿಂದ ೨೦೦ಕ್ಕೂ ಹೆಚ್ಚು ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸಿಸುತ್ತಿವೆ. ಶಾಸಕ ಎ.ಎಸ್.ಪೊನ್ನಣ್ಣ ಸ್ಥಳಕ್ಕೆ ನೀರಿನ ವ್ಯವಸ್ಥೆ ಮಾಡಿಸಿದ್ದು, ಅಧಿಕಾರಿಗಳಿಂದ ವರದಿ ಪಡೆದು ಜಿಲ್ಲಾಧಿಕಾರಿಗೆ ಹಕ್ಕುಪತ್ರ ನೀಡಲು ಸೂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಶಾಸಕ ಪೊನ್ನಣ್ಣ ಕ್ಷೇತ್ರದ ಅಭಿವೃದ್ಧಿಗೆ ದೊಡ್ಡ ಮಟ್ಟದ ಅನುದಾನ ತಂದಿದ್ದು, ಹಾಡಿಗಳಿಗೆ ಮನೆ, ಮೂಲಸೌಕರ್ಯ ಕಲ್ಪಿಸಿದ್ದಾರೆ. ಅವರ ವಿರುದ್ಧ ಸುಳ್ಳು ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಪರಶುರಾಮ್ ಆಕ್ಷೇಪಿಸಿದರು.

ಸ್ಥಳೀಯರಿಗೆ ನೀಡಿದ ನಂತರ ಉಳಿದ ಜಾಗವನ್ನು ತಾಲ್ಲೂಕಿನ ಇತರ ನಿರ್ಗತಿಕರಿಗೆ ಹಂಚಲು ತಮ್ಮ ವಿರೋಧವಿಲ್ಲ. ಆದರೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಘಟನಾ ಸಂಚಾಲಕರಾದ ಗೀತಾ, ಲಕ್ಷ್ಮಿ, ಸಿಂಗ, ಹರೀಶ್ ಇದ್ದರು.