Kodagu

ವೃದ್ಧಾಪ್ಯದಲ್ಲಿ ಪೋಷಕರನ್ನು ಆಶ್ರಮಕ್ಕೆ ಕಳುಹಿಸದೆ ಪ್ರೀತಿ, ಆರೈಕೆ ನೀಡಿ: ಪ್ರಭು ಅಯ್ಯಪ್ಪ ಕರೆ

admincoorgdaily

ವೃದ್ಧಾಪ್ಯದಲ್ಲಿ ಪೋಷಕರನ್ನು ಆಶ್ರಮಕ್ಕೆ ಕಳುಹಿಸದೆ ಪ್ರೀತಿ, ಆರೈಕೆ ನೀಡಿ: ಪ್ರಭು ಅಯ್ಯಪ್ಪ ಕರೆ

ವಿರಾಜಪೇಟೆ;
ವೃದ್ಧಾಶ್ರಮಗಳಿಗೆ ಬೇಟಿ ನೀಡಿ  ಅಲ್ಲಿನವರ ಸಮಸ್ಯೆ ಆಲಿಸಿ  ಸಹಾಯ ಮಾಡುವ ಮನಸ್ಥಿತಿ ಪ್ರತಿಯೊಬ್ಬರಲ್ಲು  ಬೆಳೆಯ ಬೇಕು ಎಂದು ಅಖಿಲ ಕೊಡವ ಕೆಂಬಟ್ಟಿ ಸಮಾಜದ ಅಧ್ಯಕ್ಷರಾದ ಬಿಲ್ಲರಿ ಕುಟ್ಟಡ ಪ್ರಭು ಅಯ್ಯಪ್ಪ  ಅಭಿಪ್ರಾಯ  ವ್ಯಕ್ತಪಡಿಸಿದರು. 

ಕೊಡವ ಕೆಂಬಟ್ಟಿ ಬಾಳಡ್ ಮತ್ತು ಅಖಿಲ ಕೊಡವ ಕೆಂಬಟ್ಟಿ ಸಮಾಜದ ವತಿಯಿಂದ  ಬೇಟೋಳಿ ಗ್ರಾಮದ  ಶಕ್ತಿ ವೃದ್ದಾಶ್ರಮದಲ್ಲಿ ಬೋಜನ ಮತ್ತು  ಹೊದಿಕೆ ವಿತರಣೆ ಕಾರ್ಯಕ್ರಮವು ಶನಿವಾರ  ನಡೆಯಿತು. 
ವೃದ್ಧಾಶ್ರಮದ ನಿವಾಸಿಗಳಿಗೆ   ಹೊದಿಕೆ ವಿತರಿಸಿ ಮಾತನಾಡಿದ  ಅಖಿಲ ಕೊಡವ ಕೆಂಬಟ್ಟಿ ಸಮಾಜದ ಅಧ್ಯಕ್ಷರಾದ ಬಿಲ್ಲರಿ ಕುಟ್ಟಡ ಪ್ರಭು ಅಯ್ಯಪ್ಪ  ಶಿಕ್ಷಿತ ಸಮಾಜವು ಇಂದು ಮಾನವೀಯ ಮೌಲ್ಯಗಳನ್ನು ಕಳೆದುಕೊಂಡಿದೆ ಎಂಬುದಕ್ಕೆ ಈ ರೀತಿಯ  ವೃದ್ಧಾಶ್ರಮಗಳು ಸಾಕ್ಷಿಯಾಗಿದೆ. ಸಾಕಿ ಸಲುಹಿ ಜೀವನ ನೀಡಿದ ತಂದೆ ತಾಯಿಗಳನ್ನು ವೃದ್ಧಾಪ್ಯದಲ್ಲಿ ಸಾಕಲಾಗದೆ ಹಲವರು ಅವರನ್ನು ಕುಟುಂಬದಿಂದ ದೂರಮಾಡಿ ಆಶ್ರಮಗಳಿಗೆ ಸೇರಿಸುತಿದ್ದಾರೆ. ಈ ರೀತಿಯ  ಮನಸ್ಥಿತಿ ಬದಲಾಗ ಬೇಕು. ಮನುಷ್ಯನು ಸಂಘ ಜೀವಿಯಾಗಿದ್ದು ಆತ ಏನನ್ನೆ ಸಂಪಾದಿಸಿದರು ಅದು ಸಮಾಜದಿಂದ ಆದರಿಂದ ಸಂಪಾದಿಸಿದರಲ್ಲಿ ಒಂದು ಪಾಲನ್ನು  ವೃದ್ಧಾಶ್ರಮ , ಅನಾಥಾಶ್ರಮಗಳಿಗೆ ನೀಡುವ ಮನಸ್ಸು ಮಾಡಬೇಕು . ಆದಷ್ಟು  ಹಬ್ಬ , ಹರಿದಿನ , ಇನ್ನಿತರ ಕಾರಣಗಳಿಂದಾದರು  ಆಶ್ರಮಕ್ಕೆ ಬೇಟಿ ನೀಡಿ ಅಲ್ಲಿನವರ ಸಮಸ್ಯೆ ಆಲಿಸಿ  ತಮ್ಮ ಕೈಯಲ್ಲಾದ ಸಹಾಯ ಮಾಡಬೇಕೆಂದರು.  

ಸಮಾಜದ ಬಿದ್ದಣಕುಟ್ಟಡ ರೋಹಿಣಿ ಪುಷ್ಪ ಅವರು ಮಾತನಾಡಿ ಇಂದು ಬೇಟೋಳಿ ಗ್ರಾಮದ ಶಕ್ತಿ ವೃದ್ಧಾಶ್ರಮದಲ್ಲಿ ಮಹತ್ವಪೂರ್ಣ ಕಾರ್ಯಕ್ರಮವು ಜರುಗಿದ್ದು ಎಲ್ಲರ ಸಹಕಾರದಿಂದ ಯಶಸು ಕಂಡಿದೆ.ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕು. ಬಡವರಿಗೆ ಸಹಾಯ ಮಾಡುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಚವರೆಕುಟ್ಟಡ ಸುಬ್ರಮಣಿ ಅವರು ಮಾತನಾಡಿ ಇಂದು ನಾವು ನಮ್ಮ ಸಮಾಜದ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇನ್ನು ಮುಂದೆಯೂ ವಿನೂತನ ಕಾರ್ಯಕ್ರಮಗಳನ್ನು ಸರ್ವರ ಸಹಕಾರದಿಂದ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಅಂತೆಯೇ ಪ್ರತಿಯೊಬ್ಬರು ವೃದ್ಧಾಶ್ರಮದ ಹಿರಿಯರ ಕುರಿತು ಕಾಳಜಿಯನ್ನು ಹೊಂದಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಬೇಕು.ಸಂಪಾದನೆಯಲ್ಲಿ ಒಂದಷ್ಟು ಮೊತ್ತವನ್ನು ಬಡವರ ಸಹಾಯಕ್ಕೆ ಬಳಸಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಉದ್ಯಮಿ ಚಿಮ್ಮಿಕುಟ್ಟಡ ನಿತೇಶ್, ಸಮಾಜದ ಕಾರ್ಯಾಧ್ಯಕ್ಷರಾದ ಕುವಳೆಕುಟ್ಟಡ ಗಿರೀಶ್, ಚಟ್ಟ ಕುಟ್ಟಡ ಸುಬ್ಬಕ್ಕಿ ಮುತ್ತಪ್ಪ, ಚವರೆಕುಟ್ಟಡ ದೇವಕಿ, ಉಮ್ಮಣಕುಟ್ಟಡ ಡಾಲಿ ಇಂದಿರಾ, ಚಿಮ್ಮಿಕುಟ್ಟಡ ಗಿರೀಶ್ ರೂಪ, ಚಿಮ್ಮಿ ಕುಟ್ಟಡ ವಿಲ್ಮಾ ಅಶೋಕ್, ಉಮ್ಮಣಕುಟ್ಟಡ ನಿಷ್ಮಾ, ಚಿಮ್ಮಿ ಕುಟ್ಟಡ ಶಿವಾನಿ ಅಶೋಕ್, ಬಿಲ್ಲರಿಕುಟ್ಟಡ ಸ್ನೇಹ, ಚಿಮ್ಮಿ ಕುಟ್ಟಡ ವಿಬಿನ್ ಕುಶಾಲಪ್ಪ, ಚಟ್ಟ ಕುಟ್ಟಡ ಶಶಿ ಅಚ್ಚಪ್ಪ, ಶಕ್ತಿ ವೃದ್ಧಾಶ್ರಮದ ಮ್ಯಾನೇಜರ್ ಹನುಮಂತ್ ಹಾಗೂ ಸಮಾಜ ಬಾಂಧವರು, ಶಕ್ತಿ ವೃದ್ಧಾಶ್ರಮದ ಹಿರಿಯರು ಉಪಸ್ಥಿತರಿದ್ದರು.