ಯುವ ಕ್ರೀಡಾ ಅಖಿಲ ಭಾರತ ರಾಷ್ಟ್ರೀಯ ಚಾಂಪಿಯನ್‌ಶಿಪ್-2026 ರಲ್ಲಿ ಚಿನ್ನದ ಪದಕ
admincoorgdaily

ವಿರಾಜಪೇಟೆ;ಗೋವಾದ ಚೌಗುಲೇ ಸ್ಪೋಟ್ಸ್ ಸೆಂಟರ್ ನಲ್ಲಿ ಯೂತ್ ಸ್ಪೋಟ್ಸ್ ಎಜುಕೇಷನ್ ಫೆಡರೇಶನ್ ಇಂಡಿಯಾ ವತಿಯಿಂದ ಸೆಪ್ಟೆಂಬರ್ 26 ರಿಂದ28 ರ ವರೆಗೆ ನಡೆದ ಅಂಡರ್ 19 ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕರ್ನಾಟಕ ತಂಡವು ಮಧ್ಯ ಪ್ರದೇಶ ತಂಡವನ್ನು ಫೈನಲ್ ನಲ್ಲಿ ಸೋಲಿಸಿ ಪ್ರಥಮ ಸ್ಥಾನ ಪಡೆಯುದರ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಈ ತಂಡದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಿ.ಕೆ.ತೇಜಸ್ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ತೇಜಸ್ ಮೂಲತಹ ವಿರಾಜಪೇಟೆ ತಾಲೂಕಿನ ಹಾಲುಗುಂದ ಗ್ರಾಮದ ದಿವಂಗತ.ಪಿ.ಸಿ.ಕಿನಿಶ್ ಮತ್ತು ವಿಂಧ್ಯಾ ದಂಪತಿಯ ಮಗನಾಗಿದ್ದು. ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನಲ್ಲಿ ಪ್ರಥಮ ಬಿ.ಎ. ವ್ಯಾಸಂಗ ಮಾಡುತಿದ್ದಾನೆ. ಕಾಲೇಜಿನ ಪ್ರಾಂಶುಪಾಲರಾದ ಡಾ ಕೆ. ಜಿ. ವೀಣಾ ತೇಜಸ್ ನನ್ನು ಆಡಳಿತ ಮಂಡಳಿ ಹಾಗೂ ಕಾಲೇಜಿನ ಪರವಾಗಿ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಎಲ್ ಆರ್ ರಾಘವೇಂದ್ರ , ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಮುಖ್ಯಸ್ಥ ಸೋಮಣ್ಣ ಉಪಸ್ಥಿತರಿದ್ದರು.