ಸುವರ್ಣ ಮಹೋತ್ಸವ ಸಂಭ್ರಮ : ಶ್ರೀ ಕೋಟೆ ಮಹಾಗಣಪತಿಗೆ 108 ಎಳನೀರು, ಪಂಚಾಮೃತ ಅಭಿಷೇಕ
admincoorgdaily

ಮಡಿಕೇರಿ ಅ.12 : ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ವತಿಯಿಂದ ಸುವರ್ಣ ಮಹೋತ್ಸವದ ಅಂಗವಾಗಿ ನವರಾತ್ರಿಯ ಮೊದಲ ದಿನ ಶ್ರೀ ಕೋಟೆ ಮಹಾಗಣಪತಿಗೆ 108 ಎಳನೀರು ಹಾಗೂ ಪಂಚಾಮೃತ ಅಭಿಷೇಕವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ನಾಡಿನ ಸಮಸ್ತ ಜನರಿಗೆ ವಿದ್ಯೆ, ಬುದ್ಧಿ ಹಾಗೂ ಉತ್ತಮ ಆರೋಗ್ಯವನ್ನು ಕರುಣಿಸಲಿ. ನವರಾತ್ರಿಯ ಈ 11 ದಿನಗಳಲ್ಲಿ ದೇವರು ಭಕ್ತರ ಎಲ್ಲಾ ಕಷ್ಟಗಳನ್ನು ಪರಿಹರಿಸಿ, ನಾಡಿನ ಜನತೆಗೆ ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ನೀಡಲಿ. ನಾಡಿನಲ್ಲಿ ಆವರಿಸಿರುವ ಬರಗಾಲದ ಛಾಯೆ ದೂರವಾಗಿ, ಇಂಗಾರು ಮಳೆ ಉತ್ತಮವಾಗಿ ಸುರಿದು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ. ನಾಡಿನ ಜನರ ಬದುಕು ಹಸನಾಗಲಿ ಎಂದು ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಪದಾಧಿಕಾರಿಗಳು ಶ್ರೀ ಕೋಟೆ ಮಹಾಗಣಪತಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅನ್ನದಾನ;
ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ಕರಗಗಳ ನಗರ ಸಂಚಾರದ ಆರಂಭದ ದಿನ ಮಹದೇವಪೇಟೆಯಲ್ಲಿ ಅನ್ನ ಸಂತರ್ಪಣೆಯ ವ್ಯವಸ್ಥೆ ಕಲ್ಪಿಸಿತ್ತು. ಸುಮಾರು 4 ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.