ಗೋಣಿಕೊಪ್ಪ ದಸರಾದಲ್ಲಿ ಗಮನ ಸೆಳೆದ ಗೀತೆಗಳ ಗಾನಸುಧೆ , ಮಕ್ಕಳ ನೃತ್ಯ ವೈಭವ
admincoorgdaily


ಗೋಣಿಕೊಪ್ಪ, ಅ.19: ಗೋಣಿಕೊಪ್ಪ ದಸರಾ ಮಹೋತ್ಸವದ ಅಂಗವಾಗಿ ಕಾವೇರಿ ದಸರಾ ಸಮಿತಿ ಹಾಗೂ ಸಾಂಸ್ಕೃತಿಕ ಸಮಿತಿಯ ವತಿಯಿಂದ ಗೋಣಿಕೊಪ್ಪ ಸರ್ಕಾರಿ ಶಾಲಾ ಮೈದಾನದ ದಸರಾ ಕಲಾ ವೇದಿಕೆಯಲ್ಲಿ
ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಕೊಡಗು ಜಿಲ್ಲಾ ಲೇಖಕರು ಮತ್ತು ಕಲಾವಿದರ ಬಳಗದ
ವತಿಯಿಂದ ಗೀತ ಗಾಯನ ಹಾಗೂ ಮಕ್ಕಳ ನೃತ್ಯ ವೈವಿಧ್ಯ ಗಮನ ಸೆಳೆಯಿತು.
ಕಲಾವಿದರ ಬಳಗದ ತಂಡದ ಗಾಯಕರಾದ ಕುಶಾಲನಗರದ ಆರ್.ರವಿ ಮತ್ತು ಕೆ.ವಿ.ಉಮೇಶ್ ನೇತೃತ್ವದ ತಂಡದ ಗಾಯಕರು ಹೇಳಿದ ಜಾನಪದ ಹಾಡುಗಳ ಗಾನಸುಧೆ ಪ್ರೇಕ್ಷಕರನ್ನು ರಂಜಿಸಿತು.
ಸಹ ಗಾಯಕರಾದ ಎಚ್.ಎಸ್.ಜಯಶೀಲಾ , ದಿನೇಶ್ ಮಲ್ಲ, ಆರ್.ಲಿಖಿತ್ ಮತ್ತು ಟಿ.ಬಿ.ಮಂಜುನಾಥ್ ಗೀತ ಗಾಯನಕ್ಕೆ ಸಾಥ್ ನೀಡುವ ಮೂಲಕ ಗಾಯನ ಹಾಡಿ ಪ್ರೇಕ್ಷಕರ
ಗಮನ ಸೆಳೆದರು.
ಇದೇ ವೇಳೆಗೆ ಪೊನ್ನಂಪೇಟೆ ನಾದನೃತ್ಯ ನಾಟ್ಯ ಶಾಲೆಯ ಕಲಾವಿದರಿಂದ ನೃತ್ಯ ವೈಭವ ಹಾಗೂ ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯದ ವತಿಯಿಂದ ಪ್ರದರ್ಶಿಸಿದ ನೃತ್ಯ ಪ್ರದರ್ಶನ ಕೂಡ ಪ್ರೇಕ್ಷಕರ ಗಮನ ಸೆಳೆಯಿತು
ಮಕ್ಕಳ ನೃತ್ಯ ವೈಭವ :
ವಿದೂಷಿ ಮಂಜು ಭಾರ್ಗವಿ ಮಾರ್ಗದರ್ಶನದಲ್ಲಿ ಕುಶಾಲನಗರದ
ಕುll ಅಭಿತ ಮತ್ತು ತಂಡದವರು
ಪ್ರದರ್ಶಿಸಿದ ನೃತ್ಯ ವೈಭವ ಪ್ರೇಕ್ಷಕರ ಗಮನ ಸೆಳೆಯಿತು.
ಈ ಮಕ್ಕಳ ತಂಡವು ಪ್ರದರ್ಶಿಸಿದ ಭರತ ನಾಟ್ಯ ಹಾಗೂ ಉಮ್ಮತ್ತಾಟ್ ಜನಪದ ಪ್ರದರ್ಶನದ ಮೂಲಕ ನಡೆಸಿಕೊಟ್ಟ ಕೋಲಾಟ ನೃತ್ಯ ಪ್ರದರ್ಶನ ಗಮನ ಸೆಳೆಯಿತು.
ವಿದ್ಯಾರ್ಥಿಗಳಾದ ಶ್ರೇಯ, ಪ್ರಾರ್ಥನ, ಲಾವಣ್ಯ,ಇಂಚರ,
ಷಷ್ಠಿಷಾಡ್ಗುಣ್ಯ, ಜಿಷ,
ಪ್ರಕೃತಿ,ಲಿವ್ಯ,ಪರಿಣಿತ,ಮೌಲ್ಯ ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್,
ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್,
ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಕಾರ್ಯಪ್ಪ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ದಿಲನ್ ಚೆಂಗಪ್ಪ, ಕಾರ್ಯದರ್ಶಿ ಚಂದನ ಮಂಜುನಾಥ್, ಸಂಚಾಲಕ ಬಿ.ಎನ್.ಪ್ರಕಾಶ್, ಸಂಯೋಜಕ ಚಂದನ್ ಕಾಮತ್, ಶೀಲಾ ಬೋಪಣ್ಣ ಇತರರು ಇದ್ದರು.
ವಿದ್ಯಾರ್ಥಿಗಳಾದ ಶ್ರೇಯ, ಪ್ರಾರ್ಥನ, ಲಾವಣ್ಯ,ಇಂಚರ,
ಷಷ್ಠಿ ಷಾಡ್ಗುಣ್ಯ, ಜಿಷ,
ಪ್ರಕೃತಿ,ಲಿವ್ಯ,ಪರಿಣಿತ,ಮೌಲ್ಯ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.