ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಚಾಲನೆ: 48ನೇ ವರ್ಷದ ಸಂಭ್ರಮಕ್ಕೆ ಸಚಿವರಿಂದ ಉದ್ಘಾಟನೆ
admincoorgdaily

ಗೋಣಿಕೊಪ್ಪ,:ಶ್ರೀ ಕಾವೇರಿ ದಸರಾ ಸಮಿತಿ (ರಿ) ಗೋಣಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ 48ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವ 2026ಕ್ಕೆ ವಿಜೃಂಭಣೆಯಿಂದ ಚಾಲನೆ ದೊರೆಯಿತು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ ಅವರೊಂದಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ವಿರಾಜಪೇಟೆ ಶಾಸಕ ಹಾಗೂ ಗೋಣಿಕೊಪ್ಪ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ಕಾವೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕುಲಚಂಡ ಪ್ರಮೋದ್ ಗಣಪತಿ, ಜಿಲ್ಲಾಧಿಕಾರಿ ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಪೊನ್ನಂಪೇಟೆ ತಹಸೀಲ್ದಾರ್ ಸಂಜನಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ನೂರೇರಾ ಧನ್ಯ, ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಮಂಜುಳ, ಅಜಿತ್ ಅಯ್ಯಪ್ಪ, ಸಾಂಸ್ಕೃತಿಕ ಸಮಿತಿ ಸಂಚಾಲಕ ಚಂಗಪ್ಪ, ಸಮಿತಿ ಸಂಚಾಲಕ ಕೊಕ್ಕಂಡ ರೋಷನ್, ಸಂಯೋಜಕರಾದ ಚಂದನ್ ಕಾಮತ್, ಕೇಶವ್ ಕಾಮತ್, ಪ್ರಧಾನ ಕಾರ್ಯದರ್ಶಿ ಬಿ.ಎಂ. ಪ್ರಕಾಶ್, ನಿರ್ದೇಶಕಿ ಚಂದನ ಮಂಜುನಾಥ್, ಕಾರ್ಯದರ್ಶಿ ವರಮಹಾಲಕ್ಷ್ಮಿ, ನಿರ್ದೇಶಕರಾದ ಶೀಲಾ ಬೋಪಣ್ಣ, ಶಾಕೀಲ್, ವಾಮನ, ಶೇಖರ್, ತೆರೇಸಾ ವಿಕ್ಟರ್, ಅಂಕಿತ್ ಪೊನ್ನಪ್ಪ, ಶೋಭಿತ, ಓಮನ, ಸಾಜಿ ಅಚ್ಚುತನ್, ಧ್ಯಾನ್, ನಾಯಂದಿರ ಶಿವಾಜಿ, ಕಡೇಮಾಡ ಸುನಿಲ್ ಮಾದಪ್ಪ, ಕಡೇಮಾಡ ಕುಸುಮ, ವಿ.ಟಿ. ವಾಸು, ಕುಂಡಚ್ಚಿರ ಮಂಜು ದೇವಯ್ಯ, ಕಿರಿಯಮಾಡ ಅರುಣ್ ಪೂಣಚ್ಚ, ಎಂ.ಜಿ. ಮೋಹನ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.