Kodagu

ಗೋಣಿಕೊಪ್ಪ: ನೂರುಲ್ ಹುದಾ ಮದರಸದಲ್ಲಿ ರಿಫಾಹಿ ಅನುಸ್ಮರಣೆ ಪ್ರಾರ್ಥನಾ ಸಂಗಮ

admincoorgdaily

ಗೋಣಿಕೊಪ್ಪ: ನೂರುಲ್ ಹುದಾ ಮದರಸದಲ್ಲಿ ರಿಫಾಹಿ ಅನುಸ್ಮರಣೆ ಪ್ರಾರ್ಥನಾ ಸಂಗಮ
1002780127.jpg


ಗೋಣಿಕೊಪ್ಪ: ನೂರುಲ್ ಹುದಾ ಮದರಸ ಆವರಣದಲ್ಲಿ SKSBV ವತಿಯಿಂದ ರಿಫಾಹಿ ಅನುಸ್ಮರಣೆ ಪ್ರಾರ್ಥನಾ ಸಂಗಮ ನಡೆಯಿತು.

ಮಹಲ್ ಅಧ್ಯಕ್ಷರಾದ ಅಶ್ರಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಿಫಾಹಿ ಶೇಖ್ ಅವರ ಜೀವನ ಚರಿತ್ರೆಯನ್ನು ವಿವರಿಸಿ, ಮಕ್ಕಳು ಅವರ ಜೀವನ ಶೈಲಿಯನ್ನು ಮಾದರಿಯಾಗಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿ, ಸಭೆಯ ಉದ್ಘಾಟನಾ ಭಾಷಣ ಮಾಡಲಾಯಿತು.

ಮಹಲ್ ಕಾರ್ಯದರ್ಶಿ ಅಬ್ದುಲ್ ಸಲಾಂ ಅವರು ಮಾತನಾಡಿ, ಮಕ್ಕಳು ಉತ್ತಮ ರೀತಿಯಲ್ಲಿ ಇಸ್ಲಾಮಿನ ಚೌಕಟ್ಟಿನಲ್ಲಿ ಜೀವಿಸಿ ಎಲ್ಲರಿಗೂ ಮಾದರಿಯಾಗಬೇಕೆಂದು ಕರೆ ನೀಡಿ ಆಶಂಸ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮಹಲ್ ಉಪಾಧ್ಯಕ್ಷ ಶೌಕತ್ ಅಲಿ, ಇಬ್ರಾಹಿಂ, ಅಶ್ರಫ್, ಶಫೀಕ್, ಅಲಿ, ಅಬ್ದುಲ್ ರಜಾಕ್, ಎಂ.ಸಿ. ಅಶ್ರಫ್ ಮುಸ್ಲಿಯಾರ್, ಶಫೀಕ್ ದಾರಿಮಿ, ಮಜೀದ್ ಬಾಖವಿ, ಜುಬೇರ್ ಫೈಝಿ, ಖಾದರ್ ಮುಸ್ಲಿಯಾರ್, ಅಝೀಝ್ ಬಾಖವಿ, ಗಫೂರ್ ಬಾಖವಿ, ಸಅದ್ ಫೈಝಿ ಮತ್ತಿತರರು ಹಾಜರಿದ್ದರು.

ಮದರಸ ಪ್ರಾಂಶುಪಾಲ ರಿಯಾಜ್ ಬಾಖವಿ ಅವರು ಮಕ್ಕಳಿಗೆ ಕ್ವಿಜ್ ನಡೆಸಿ, ವಿಜಯಶಾಲಿಯಾದ ಮಕ್ಕಳಿಗೆ ಬಹುಮಾನ ವಿತರಿಸಿ ಗೌರವಿಸಿದರು.

ಕೊನೆಯಲ್ಲಿ ಮಹಲ್ ಖತೀಬ್ ಮುಹಮ್ಮದ್ ಅಲಿ ಫೈಝಿ ಅವರು ಪ್ರಾರ್ಥನಾ ಸಂಗಮಕ್ಕೆ ನೇತೃತ್ವ‌ ನೀಡಿದರು.