ಗೋಣಿಕೊಪ್ಪಲಿ ರೂ. 48 ಲಕ್ಷ ವೆಚ್ಚದ ಸುಸಜ್ಜಿತ ಬೈಪಾಸ್ ರಸ್ತೆ ಲೋಕಾರ್ಪಣೆ
admincoorgdaily

ಗೋಣಿಕೊಪ್ಪ:ಗೋಣಿಕೊಪ್ಪಲು ಭಾಗದ ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿದ್ದ ಸುಸಜ್ಜಿತ ಬೈಪಾಸ್ ರಸ್ತೆ ಉನ್ನತೀಕರಣ ಕಾಮಗಾರಿಯು ಪೂರ್ಣಗೊಂಡಿದ್ದು, ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಶ್ರೀ ಎ.ಎಸ್. ಪೊನ್ನಣ್ಣ ಅವರು ಸ್ಥಳೀಯ ನಾಗರಿಕರ ಇಚ್ಛೆಯಂತೆ ಲೋಕಾರ್ಪಣೆಗೊಳಿಸಿದರು.
ಮಾನ್ಯ ಶಾಸಕರ ವಿಶೇಷ ಅನುದಾನದ ರೂ. 48 ಲಕ್ಷ ವೆಚ್ಚದಲ್ಲಿ ಈ ರಸ್ತೆ ಅಭಿವೃದ್ಧಿಪಡಿಸಲಾಗಿದೆ.
ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಅತ್ಯಂತ ವಾಹನ ಸಂಚಾರ ಹೊಂದಿರುವ ಈ ರಸ್ತೆಯ ಅಭಿವೃದ್ಧಿಯಿಂದಾಗಿ ಜನರಿಗೆ ಸುಗಮ ಸಂಚಾರಕ್ಕೆ ಅವಕಾಶ ಒದಗುವುದರೊಂದಿಗೆ ಸ್ಥಳೀಯ ವ್ಯಾಪಾರಕ್ಕೂ ಅನುಕೂಲವಾಗಲಿದೆ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ನೂರೇರ ಧನ್ಯ ರವೀಂದ್ರ, ಬ್ಲಾಕ್ ಮಹಿಳಾ ಅಧ್ಯಕ್ಷೆ ಆಶಾ ಪೂಣಚ್ಚ, ಪೊನ್ನಂಪೇಟೆ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು, ಗೋಣಿಕೊಪ್ಪ ಪಂಚಾಯಿತಿ ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಮಂಜುಳ, ಹಿರಿಯರಾದ ಮುಕಳೇರ ಕುಶಾಲಪ್ಪ, ಅಜಿತ್ ಅಯ್ಯಪ್ಪ, ಬಿ.ಎಂ. ಪ್ರಕಾಶ್, ಪಿ.ಜಿ. ರಾಜಶೇಖರ್, ನಾಯಂದಿರ ಶಿವಾಜಿ, ರೋಶನ್, ಕಮಿಟಿ ಡೈರೆಕ್ಟರ್ ಚೇಂಬರ್ ಪ್ರೆಸಿಡೆಂಟ್ ಸುನಿಲ್ ಮಾದಪ್ಪ, ಲೇಔಟ್ ಕಮಿಟಿ ಡೈರೆಕ್ಟರ್ ಸೋಮಣ್ಣ, ಪೊನ್ನಂಪೇಟೆ ತಾಲೂಕು ಮಾಜಿ ಮಹಿಳಾ ಅಧ್ಯಕ್ಷೆ ಭಾರತಿ, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜುನೈದ್, ಕೊಕ್ಕಂಡ ರೋಷನ್, ವಿಟಿವಾಸಿ, ಕುಂಡಚ್ಚಿರ ಮಂಜು ದೇವಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಯುವ ಕಾಂಗ್ರೆಸ್ಸಿನ ಅಂಕಿತ್ ಪೊನ್ನಪ್ಪ, ಕಲ್ಪನಾ, ಕೋಡಿರ ವಿನೋದ್ ನಾಣಯ್ಯ, ಉದಯ್ ಮಾದಪ್ಪ, ಗ್ಯಾರಂಟಿ ಸಮಿತಿ ಸದಸ್ಯರಾದ ಮುತ್ತಣ್ಣ, ಆಫ್ಜಲ್, ಖಲೀದ್ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.