Kodagu

ಬಿಎಸ್ಸಿ / ಎಂಎಸ್ಸಿ ಆದವರಿಗೆ ಗುಡ್ ನ್ಯೂಸ್ - ಕೊಡಗಿನಲ್ಲಿ ಉದ್ಯೋಗ

admincoorgdaily

ಬಿಎಸ್ಸಿ / ಎಂಎಸ್ಸಿ ಆದವರಿಗೆ ಗುಡ್ ನ್ಯೂಸ್ - ಕೊಡಗಿನಲ್ಲಿ ಉದ್ಯೋಗ
ಮಡಿಕೇರಿ :-ಕೊಡಗು ಜಿಲ್ಲೆ ಕೃಷಿ ಇಲಾಖೆಯ ಕೃಷಿಯೋನ್ನತ್ತಿ ಕೃಷಿ ವಿಸ್ತರಣೆ ಉಪ ಅಭಿಯಾನ (ಆತ್ಮ) ಯೋಜನೆಯಡಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು 01 ಹುದ್ದೆಯನ್ನು ಒಪ್ಪಂದದ ಆಧಾರದ ಮೇಲೆ 2026-27ನೇ ಸಾಲಿನ ಸೀಮಿತ ಅವಧಿಗೆ ಕೊಡಗು ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಷರತ್ತಿಗೆ ಒಳಪಟ್ಟು ಅರ್ಜಿ ಆಹ್ವಾನಿಸಿದೆ.  

ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಹುದ್ದೆಗೆ ಬಿಎಸ್ಸಿ/ ಎಂಎಸ್ಸಿ(ಕೃಷಿ/ತೋಟಗಾರಿಕೆ/ ಮೀನುಗಾರಿಗೆ/ಅರಣ್ಯ ರೇಷ್ಮೆ) ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಟ 1 ವರ್ಷ ಕೃಷಿ ವಿಸ್ತರಣಾ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ ಅನುಭವ ಹಾಗೂ ಎಂ.ಎಸ್ ಆಫಿಸ್‍ನಲ್ಲಿ ಪರಿಣತಿ ಹೊಂದಿರತಕ್ಕದ್ದು. ಗರಿಷ್ಟ 45,ಮಾಸಿಕ 25000 
ಈ ಹುದ್ದೆಗೆ ಅರ್ಹರಿರುವ ಅಭ್ಯರ್ಥಿಗಳು ನವೆಂಬರ್, 30 ರೊಳಗೆ ಕಚೇರಿ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಸಮಗ್ರ ಕೃಷಿ ಪದ್ದತಿ-ಉತ್ಕೃಷ್ಟ ಕೇಂದ್ರ ಕಟ್ಟಡ ರೇಸ್ ಕೊರ್ಸ್ ರಸ್ತೆ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಆತ್ಮ ವಿಭಾಗ, ಕೊಡಗು ಜಿಲ್ಲೆ, ಮಡಿಕೇರಿ ಇವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಚಂದ್ರಶೇಖರ್ ಅವರು ತಿಳಿಸಿದ್ದಾರೆ.