ಐ.ಟಿ.ಐ ಆದವರಿಗೆ ಗುಡ್ ನ್ಯೂಸ್ - BHEL ನಲ್ಲಿ ಖಾಯಂ ಕೆಲಸ
admincoorgdaily

ಮಡಿಕೇರಿ:-ಭಾರತ ಸರ್ಕಾರದ ಉದ್ಯಮವಾದ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ನಲ್ಲಿ ಫಿಟ್ಟರ್, ವೆಲ್ಡರ್, ಟರ್ನರ್, ಮೆಷಿನಿಸ್ಟ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಮತ್ತು ಫೌಂಡ್ರಿಮ್ಯಾನ್ ಟ್ರೇಡ್ಗಳಲ್ಲಿ 2 ವರ್ಷ ಐ.ಟಿ.ಐ ತರಬೇತಿ ಪಡೆದ ನಂತರ ಒಂದು ವರ್ಷ ಅಪ್ರೆಂಟಿಶಿಪ್ ತರಬೇತಿ ಪೂರ್ಣಗೊಳಿಸಿ ಸರ್ಟಿಫಿಕೇಟ್ ಪಡೆದಿರುವ ಹಾಗೂ ಒಂದು ವರ್ಷ ಅಪ್ರೆಂಟಿಶಿಪ್ ತರಬೇತಿ ಮಾಡುತ್ತಿರುವ ಐ.ಟಿ.ಐ ವಿದ್ಯಾರ್ಹತೆ ಹೊಂದಿದ ಪುರುಷ ಮತ್ತು ಮಹಿಳಾ ಅರ್ಹ ಅಭ್ಯರ್ಥಿಗಳಿಗೆ ಗ್ರೇಡ್-ಐವಿ ನಲ್ಲಿ ಖಾಯಂ ಹುದ್ದೆಗಾಗಿ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:18-11-2026. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬಿಎಚ್ಇಎಲ್ ಸಂಸ್ಥೆಯ ಅಧಿಕೃತ ಅಭ್ಯರ್ಥಿಗಳು ವೆಬ್ಸೈಟ್:https://careers.bhel.in
ಮೂಲಕ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ಉದ್ಯೋಗಾಂಕ್ಷಿಗಳು ಈ ನೇಮಕಾತಿ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ, ಜಿಲ್ಲಾ ಉದ್ಯೋಗಾಧಿಕಾರಿ, ಸಿ.ಬಿ.ಮಂಜುನಾಥ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ. ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 8296020826, 9449692691 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಉದ್ಯೋಗಾಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.