ಹೊಸ ಕೈಗಾರಿಕೆಗಳಿಗೆ ಗುಡ್ ನ್ಯೂಸ್;6 ಲಕ್ಷದವರೆಗೆ ಬಡ್ಡಿ ಸಹಾಯಧನ
admincoorgdaily

ಮಡಿಕೇರಿ :-2025-26ನೇ ಸಾಲಿಗೆ ಕೇಂದ್ರ ಸರ್ಕಾರದ ಎಂಎಸ್‍ಎಂಇ. ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಯೋಗದೊಂದಿಗೆ ಅನುಷ್ಠಾನನಗೊಳಿಸಲಾಗುತ್ತಿರುವ ವಿಶ್ವಬ್ಯಾಂಕ್ ನೆರವಿನ ರ್ಯಾಂಪ್ (ರೈಸಿಂಗ್ ಅಂಡ್ ಅಕ್ಸಲರೇಟಿಂಗ್ ಎಂಎಸ್‍ಎಂಇ ಪರ್‍ಪಾರ್ಮೆನ್ಸ್) ಯೋಜನೆಯಡಿ,
ದಿನಾಂಕ 04.09.2024 ರಂದು ಅಥವಾ ನಂತರ ವಾಣಿಜ್ಯ ಉತ್ಪಾದನೆಯನ್ನು ಆರಂಭಿಸಿರುವ ಕೊಡಗು ಜಿಲ್ಲೆಯ ಹೊಸ ಉತ್ಪಾದನಾ ಆಧಾರಿತ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ (ವ್ಯಾಪಾರ ಹಾಗೂ ಸೇವಾ ವಲಯಕ್ಕೆ ಅವಕಾಶವಿಲ್ಲ) ಗರಿಷ್ಠ ರೂ. 1 ಕೋಟಿ ರೂ ವರೆಗಿನ ಅವಧಿ ಸಾಲಕ್ಕೆ ಮೊದಲ 12 ತಿಂಗಳ ಬಡ್ಡಿಯಲ್ಲಿ ಶೇ.6 ರಂತೆ ಅಥವಾ ಗರಿಷ್ಠ ರೂ. 6 ಲಕ್ಷಗಳವರೆಗೆ (ಯಾವುದು ಕಡಿಮೆಯೋ ಅದು) ಒಂದು ಬಾರಿಯ ಬಡ್ಡಿ ಸಹಾಯಧನವನ್ನು ನೇರವಾಗಿ ಸಾಲದ ಖಾತೆಗೆ ಜಮೆ ಮಾಡಲು ಅರ್ಹ ಘಟಕಗಳಿಂದ ಪ್ರಸ್ತಾವನೆ ಆಹ್ವಾನಿಸಲಾಗಿದೆ.
ಆಸಕ್ತ ಹೊಸ ಉದ್ಯಮಿಗಳು ಸಂಬಂಧಪಟ್ಟ ಬ್ಯಾಂಕ್ ಶಾಖೆಯ ಮೂಲಕ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಹಿನೂರ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ - 571201 ಇಲ್ಲಿಗೆ ಖುದ್ದಾಗಿ ಅಥವಾ ದೂರವಾಣಿ ಮುಖೇನ (ದೂರವಾಣಿ ಸಂಖ್ಯೆ: 08272-228746, 7975556779, 8553226664, 9845596252) ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.