ಸೆ.26 ರಂದು ಮಡಿಕೇರಿ ಗುಡ್ಮಿಂಟನ್ ಗ್ರೂಪ್ ವತಿಯಿಂದ “ಗುಡ್ಮಿಂಟನ್ ಕಪ್ 2026” ಬ್ಯಾಡ್ಮಿಂಟನ್ ಪಂದ್ಯಾವಳಿ
admincoorgdaily

ಮಡಿಕೇರಿ ಸೆ.18 : ಮಡಿಕೇರಿ ಗುಡ್ಮಿಂಟನ್ ಗ್ರೂಪ್ ವತಿಯಿಂದ “ಮಡಿಕೇರಿ ಗುಡ್ಮಿಂಟನ್ ಕಪ್ 2026” ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಸೆ.26ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಮಡಿಕೇರಿ ಗುಡ್ಮಿಂಟನ್ ಗ್ರೂಪ್ ಅಧ್ಯಕ್ಷ ಶಮ್ಮಿ ಸುಬ್ಬಯ್ಯ ಹಾಗೂ ಗೌರವಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ತಿಳಿಸಿದ್ದಾರೆ.
“ಸ್ವಾತಂತ್ರ್ಯವನ್ನು ಆಚರಿಸಿ, ಬ್ಯಾಡ್ಮಿಂಟನ್ ಆಡಿ, ಫಿಟ್ ಆಗಿರಿ” ಎಂಬ ಆಶಯದೊಂದಿಗೆ ನಡೆಯಲಿರುವ ಪಂದ್ಯಾವಳಿ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ.
ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್ ಮುಕ್ತ ಹಾಗೂ ಪುರುಷರ ಡಬಲ್ಸ್ ಜಂಬಲ್ಸ್ 90+ ಎಂಬ ಎರಡು ವಿಭಾಗಗಳಿವೆ. ಜಂಬಲ್ಸ್ 90+ ವಿಭಾಗದಲ್ಲಿ ಕನಿಷ್ಠ 40 ವರ್ಷ ವಯಸ್ಸಿನ ಒಬ್ಬ ಆಟಗಾರರಿದ್ದು, ಇಬ್ಬರು ಆಟಗಾರರ ಒಟ್ಟು ವಯಸ್ಸು 90 ವರ್ಷ ಅಥವಾ ಅದಕ್ಕಿಂತ ಹೆಚ್ಚಿರಬೇಕು.
ಪ್ರತಿ ವಿಭಾಗದಲ್ಲಿ ಮೊದಲ 32 ತಂಡಗಳ ನಮೂದನ್ನು ಮಾತ್ರ ಪರಿಗಣಿಸಲಾಗುತ್ತದೆ. ಸ್ಪರ್ಧಿಗಳು ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಪ್ರತಿ ತಂಡಕ್ಕೆ ಪ್ರವೇಶ ಶುಲ್ಕ ರೂ.1 ಸಾವಿರ ನಿಗದಿಪಡಿಸಲಾಗಿದೆ. ಹೆಸರು ನೋಂದಣಿಗೆ ಸೆ.20 ಕೊನೆಯ ದಿನವಾಗಿದೆ.
ಲೀಗ್ ಪಂದ್ಯಗಳು 30 ಅಂಕಗಳದ್ದಾಗಿದ್ದು, ಕ್ವಾರ್ಟರ್ ಫೈನಲ್ ಮತ್ತು ನಂತರದ ಪಂದ್ಯಗಳು ಮೂರು ಪಂದ್ಯಗಳಲ್ಲಿ ಅತ್ಯುತ್ತಮ ಮಾದರಿಯಲ್ಲಿ ನಡೆಯಲಿವೆ. 3ನೇ ಮತ್ತು 4ನೇ ಸ್ಥಾನದ ಪಂದ್ಯವೂ 30 ಅಂಕಗಳದ್ದಾಗಿರುತ್ತದೆ.
ಪಂದ್ಯಾವಳಿಯಲ್ಲಿ ಯೋನೆಕ್ಸ್ ಮಾವಿಸ್ 350 ಶಟಲ್ ಕಾಕ್ ಗಳನ್ನು ಬಳಸಲಾಗುತ್ತದೆ. ತಂಡಗಳು ತಮ್ಮ ಪಂದ್ಯ ಆರಂಭಕ್ಕೆ 15 ನಿಮಿಷ ಮುಂಚಿತವಾಗಿ ವರದಿ ಮಾಡಬೇಕು. ವಿಳಂಬವಾದಲ್ಲಿ ವಾಕ್ ಓವರ್ ನೀಡಲಾಗುವುದು ಎಂದು ಶಮ್ಮಿ ಸುಬ್ಬಯ್ಯ ಹಾಗೂ ಕುಕ್ಕೇರ ಜಯ ಚಿಣ್ಣಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡೂ ವಿಭಾಗಗಳ ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ ರೂ.9,999, ದ್ವಿತೀಯ ಬಹುಮಾನ 7,777, ತೃತೀಯ ಬಹುಮಾನ 5,555 ಹಾಗೂ ನಾಲ್ಕನೇ ಬಹುಮಾನ 2,222 ನೀಡಲಾಗುವುದು.
ಹೆಸರು ನೋಂದಾಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 9482130496, 9481821759, 9483785599 ಮತ್ತು 9380819088 ನ್ನು ಸಂಪರ್ಕಿಸಬಹುದಾಗಿದೆ.