ದುಬೈನಲ್ಲಿ ಎಮ್ಮೆಮಾಡು ಯುಎಇ ಅನಿವಾಸಿ ಒಕ್ಕೂಟದಿಂದ ಯಶಸ್ವಿಯಾಗಿ ನಡೆದ ಗ್ರ್ಯಾಂಡ್ ಮೀಲಾದ್ ಸಮಾವೇಶ ಕಾರ್ಯಕ್ರಮ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ದುಬೈನಲ್ಲಿರುವ ಎಮ್ಮೆಮಾಡು ಯುಎಇ ಅನಿವಾಸಿ ಒಕ್ಕೂಟದ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1501ನೇ ಜನ್ಮ ದಿನಾಚರಣೆಯ ಅಂಗವಾಗಿ ಆಚರಿಸಲ್ಪಡುವ ಗ್ರ್ಯಾಂಡ್ ಮೀಲಾದ್ ಸಮಾವೇಶವು ದುಬೈನಲ್ಲಿ ಸಂಭ್ರಮದಿಂದ ನಡೆಯಿತು.
ದುಬೈನಲ್ಲಿರುವ ಬನಿಯಾಸ್‌ನ ಲ್ಯಾಂಡ್‌ಮಾರ್ಕ್ ಹೋಟೆಲ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ಜನಾಬ್ ಜುಬೈರ್ ಕೂರುಳಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮ ಬುರ್ದಾ ಮಜ್ಲಿಸ್‌ನೊಂದಿಗೆ ಆರಂಭಗೊಂಡಿತು.
ಫೈಝಲ್ ಸಖಾಫಿ ಹಾಗೂ ಸಂಗಡಿಗರು ಬುರ್ದಾ ಮಜ್ಲಿಸ್ ನಡೆಸಿಕೊಟ್ಟರು. ಬಳಿಕ ನಡೆದ ಮೌಲೂದ್ ಮಜ್ಲಿಸ್‌ಗೆ ಸಲಾಂ ಹಿಮಮಿ, ಯುಎಇ ಸಂಘಟನೆಯ ನಾಯಕರು, ಶಾಫಿ ಸಖಾಫಿ ಕೊಂಡಂಗೇರಿ ಕೋಶಾಧಿಕಾರಿ, ಹಮೀದ್ ಸಖಾಫಿ ಕೆ ಸಿ ಎಫ್ ನಾರ್ತ್ ಝೋನ್ ನಾಯಕರು ಸೇರಿದಂತೆ ಹಲವು ಗಣ್ಯರು ನೇತೃತ್ವ ನೀಡಿದರು.
ಮೀಲಾದ್ ಸಮಾವೇಶದ ಅಂಗವಾಗಿ ಪುಟಾಣಿ ಮಕ್ಕಳ ಮನರಂಜನಾ ಹಾಡುಗಳು ಹಾಗೂ ಭಾಷಣ ಕಾರ್ಯಕ್ರಮ ನಡೆಯಿತು.ಬಳಿಕ ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್‌ನ ಅಧೀನದಲ್ಲಿ ನಡೆಸಿಕೊಂಡು ಬರುತ್ತಿರುವ ರಿಫಾಯಿ ದಫ್ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು.ಕಾರ್ಯಕ್ರಮದಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮ್ಮಾನ ಕಾರ್ಯಕ್ರಮ ನಡೆಸಲಾಯಿತು.
ಸಮಾರಂಭದ ಮುಖ್ಯ ವೇದಿಕೆ ಕಾರ್ಯಕ್ರಮದಲ್ಲಿ ಅಲ್ ಹಾಜಿ ಅಹ್ಮದ್ ಇಬ್ರಾಹಿಂ ಇಮಾಮ್ ಅಬುಧಾಬಿ ಅವರು ಪ್ರಾರ್ಥನೆಗೆ ನೇತೃತ್ವ ನೀಡಿದರು. ಶಫೀಕ್ ಹಿಶಾಮಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಒಕ್ಕೂಟದ ಅಧ್ಯಕ್ಷರಾದ ಜುಬೈರ್ ಕೂರುಳಿ ಅಧ್ಯಕ್ಷೀಯ ಭಾಷಣ ಮಾಡಿದರು.ಜಿಸಿಸಿ ಸಲಹಾ ಸಮಿತಿ ಚೇರ್ಮನ್ ಅಬೂಬಕರ್ ಹಾಜಿ ಆಶಂಸ ಭಾಷಣ ಮಾಡಿದರು.ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯು ಎಇ ಅಧ್ಯಕ್ಷರಾದ ಜನಾಬ್ ಅಹ್ಮದ್ ಹಾಜಿ ಚಾಮಿಯಲ್, ಕೆ ಸಿ ಎಫ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಉಳ್ಳಾಲ, ಶುಕೂರ್ ಹಾಜಿ ಉಳ್ಳಾಲ, ನಾಸರ್ ಸಅದಿ ಎಮ್ಮೆಮಾಡು, ನಾಸರ್ ಉಸ್ತಾದ್ ಮಂಜೇರಿ, ಒಕ್ಕೂಟದ ಉಪಾಧ್ಯಕ್ಷ ಹಂಝ ಎಮ್ಮೆಮಾಡು ಹಾಗೂ ಸಯೀದ್ ಕುಂಜಿತೋಡಿ ಸೇರಿದಂತೆ ಗಣ್ಯರು ಪ್ರವಾದಿಯವರ ಜೀವನ ಚರಿತೆ ಆದರ್ಶ ಗುಣಗಳ ಕುರಿತು ತಾತಂಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಮ್ಮೆಮಾಡು ಯು ಎ ಇ ಆನಿವಾಸಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಮಕ್ಕಳು,ಮಹಿಳೆಯರು ಸೇರಿದಂತೆ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.