Kodagu

ನಾಂಗಲದಲ್ಲಿ ಮಹಿಳಾ ಸಮಾಜದ ನೂತನ ಕಟ್ಟಡಕ್ಕೆ ಭೂಮಿ ಪೂಜೆ

admincoorgdaily

ನಾಂಗಲದಲ್ಲಿ ಮಹಿಳಾ ಸಮಾಜದ ನೂತನ ಕಟ್ಟಡಕ್ಕೆ ಭೂಮಿ ಪೂಜೆ
ಬಿಟ್ಟಂಗಾಲ:ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಭಾಗದ ನಾಂಗಲ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಹಿಳಾ ಸಮಾಜದ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿತು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಟ್ಟಡಕ್ಕೆ ಬೇಕಾಗಿರುವ ಅಗತ್ಯ ಹಣದ ವ್ಯವಸ್ಥೆಯನ್ನು ಆದಷ್ಟು ಶೀಘ್ರ ಮಾಡಿಕೊಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜೋಕಿಮ್, ಬಿಟ್ಟಂಗಾಲ ವಲಯ ಅಧ್ಯಕ್ಷ ಲೋಹಿತ್, ಪಕ್ಷದ ಮುಖಂಡರಾದ ಕಂಜಿತಂಡ ಪೂವಣ್ಣ, ಕುಪ್ಪಂಡ ಬೋಪಣ್ಣ, ಮಹಿಳಾ ಸಮಾಜದ ಅಧ್ಯಕ್ಷೆ ಬೋಪ್ಪಂಡ ಬೇಬಿ, ಬುಟ್ಟಿಯಂಡ ಸೀತಮ್ಮ, ಚೆಂದಂಡ ಪೊನ್ನಣ್ಣ ಹಾಗೂ ಮಹಿಳಾ ಸಮಾಜದ ಸರ್ವ ಸದಸ್ಯರು ಉಪಸ್ಥಿತರಿದ್ದರು.