ಮಾದೇರಪ್ಪ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 3 ಲಕ್ಷ ಧನಸಹಾಯ ಹಸ್ತಾಂತರ
admincoorgdaily

ವಿರಾಜಪೇಟೆ:ತಾಲೂಕಿನ ವಿರಾಜಪೇಟೆ ವಲಯದ ಕಡಂಗ ಕಾರ್ಯಕ್ಷೇತ್ರದ ಬೆಳ್ಳುಮಾಡು ಗ್ರಾಮದ ಶ್ರೀ ಮಾದೇರಪ್ಪ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ರೂ 3,00,000 (ಮೂರು ಲಕ್ಷ ರೂ.) ಅನುದಾನ ಮಂಜೂರು ಮಾಡಿದ್ದಾರೆ.
ಈ ಮಂಜೂರಾತಿ ಡಿ.ಡಿ.ಯನ್ನು ತಾಲೂಕು ಯೋಜನಾಧಿಕಾರಿ ಹರೀಶ್ ಪಿ. ಅವರು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಶಿವಕುಮಾರ್ ಬಿ., ಸೇವಾಪ್ರತಿನಿಧಿ ತೇಜಸ್ವಿನಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.