ಹಾರಂಗಿ ದುರಂತ;ಮರಣೋತ್ತರ ಪರೀಕ್ಷೆ ಬಳಿಕ ದಂಪತಿ ಮೃತದೇಹ ಹಸ್ತಾಂತರ - ರಿವರ್ ಅಡ್ವೆಂಚರ್ ಸ್ಪೋರ್ಟ್ ಸ್ಥಗಿತ!
admincoorgdaily

ಕುಶಾಲನಗರ:ಹಾರಂಗಿ ಹಿನ್ನೀರಿನಲ್ಲಿ ಸ್ಪೀಡ್ ಬೋಟ್ ದುರಂತದಲ್ಲಿ ಮೃತಪಟ್ಟ ದಂಪತಿಗಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಮೃತದೇಹಗಳನ್ನು ವಿಮಾನ ಮೂಲಕ ಗುಜರಾತ್ಗೆ ರವಾನಿಸಲಾಗುತ್ತಿದೆ.
ಘಟನೆ ಹಿನ್ನೆಲೆಯಲ್ಲಿ ರಿವರ್ ಅಡ್ವೆಂಚರ್ ಸ್ಪೋರ್ಟ್ ಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಸಮಗ್ರ ತನಿಖೆ ನಂತರ ಘಟನೆಗೆ ಕಾರಣ ತಿಳಿದುಬರಲಿದೆ.
ಶುಕ್ರವಾರ ರಾತ್ರಿ ಮೃತರ ಮಕ್ಕಳನ್ನು ಶಾಸಕ ಡಾ. ಮಂತರ್ ಗೌಡ ಭೇಟಿ ಮಾಡಿ ಸಾಂತ್ವನ ಹೇಳಿದರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿದ್ದ ಮೃತ ದಂಪತಿಯ ಮಕ್ಕಳಿಂದ ಘಟನೆ ಬಗ್ಗೆ ಮಾಹಿತಿ ಪಡೆದು ಸಾಂತ್ವನ ಹೇಳಿದರು. ಮೃತದೇಹಗಳನ್ನು ಇರಿಸಿರುವ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು.